Select Your Language

Notifications

webdunia
webdunia
webdunia
webdunia

ಡಬ್ಲ್ಯುಪಿಎಲ್: ಮತ್ತೊಂದು ಗೆಲುವಿನ ನಿರೀಕ್ಷೆಯಲ್ಲಿ ಮುಂಬೈ ಇಂಡಿಯನ್ಸ್

ಡಬ್ಲ್ಯುಪಿಎಲ್: ಮತ್ತೊಂದು ಗೆಲುವಿನ ನಿರೀಕ್ಷೆಯಲ್ಲಿ ಮುಂಬೈ ಇಂಡಿಯನ್ಸ್
ಮುಂಬೈ , ಮಂಗಳವಾರ, 14 ಮಾರ್ಚ್ 2023 (08:50 IST)
ಮುಂಬೈ: ಡಬ್ಲ್ಯುಪಿಎಲ್ ಕೂಟದಲ್ಲಿ ಸೋಲೇ ಅರಿಯದೆ ಮೆರೆದಾಡುತ್ತಿರುವ ಮುಂಬೈ ಇಂಡಿಯನ್ಸ್ ಇಂದು ಐದನೇ ಪಂದ್ಯದಲ್ಲಿ ಗುಜರಾತ್ ಜೈಂಟ್ಸ್ ವಿರುದ್ಧ ಆಡಲಿದೆ.

ಕಳೆದ ಪಂದ್ಯದಲ್ಲಿ ಹರ್ಮನ್ ಪ್ರೀತ್ ಕೌರ್ ಪಡೆ ಯುಪಿ ವಾರಿಯರ್ಸ್ ವಿರುದ್ಧ 8 ವಿಕೆಟ್ ಗಳ ಗೆಲುವು ಸಾಧಿಸಿತ್ತು. ಇದರೊಂದಿಗೆ ಮುಂಬೈ ಅಗ್ರ ಸ್ಥಾನದಲ್ಲಿದೆ. ಈ ಟೂರ್ನಿಯಲ್ಲಿ ಪ್ರತೀ ಪಂದ್ಯದಲ್ಲೂ ಎಲ್ಲಾ ವಿಭಾಗಗಳಲ್ಲೂ ಮೆರೆದಾಡಿದ ಏಕೈಕ ತಂಡವೆಂದರೆ ಮುಂಬೈ.

ಅತ್ತ ಗುಜರಾತ್ ಜೈಂಟ್ಸ್ ಇದುವರೆಗೆ ಟೂರ್ನಿಯಲ್ಲಿ ಸೋಲು-ಗೆಲುವು ಎರಡನ್ನೂ ಸಮನಾಗಿ ಕಂಡಿದೆ. ಖಾಯಂ ನಾಯಕಿಯ ಅನುಪಸ್ಥಿತಿಯಲ್ಲಿ ಪ್ರಬಲ ತಂಡದ ಎದುರು ಹೋರಾಡುವುದು ಗುಜರಾತ್ ಗೆ ಸುಲಭವಲ್ಲ. ಈ ಪಂದ್ಯ ಸಂಜೆ 7.30 ಕ್ಕೆ ಆರಂಭವಾಗಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಭಾರತ-ಆಸ್ಟ್ರೇಲಿಯಾ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ಯಾವಾಗ? ಎಲ್ಲಿ?