Select Your Language

Notifications

webdunia
webdunia
webdunia
webdunia

ಡಬ್ಲ್ಯುಪಿಎಲ್: ಆರ್ ಸಿಬಿಗೆ ಸೋಲುವುದೇ ಖಯಾಲಿ

ಡಬ್ಲ್ಯುಪಿಎಲ್: ಆರ್ ಸಿಬಿಗೆ ಸೋಲುವುದೇ ಖಯಾಲಿ
ಮುಂಬೈ , ಮಂಗಳವಾರ, 14 ಮಾರ್ಚ್ 2023 (08:20 IST)
ಮುಂಬೈ: ಡಬ್ಲ್ಯುಪಿಎಲ್ ಕೂಟದಲ್ಲಿ ಆರ್ ಸಿಬಿ ಮತ್ತೆ ಸೋಲು ಕಂಡಿದೆ. ಐದನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಕೊನೆಯ ಹಂತದಲ್ಲಿ ಮುಗ್ಗರಿಸಿದೆ.

ಮೊದಲು ಬ್ಯಾಟಿಂಗ್ ಮಾಡಿದ ಆರ್ ಸಿಬಿ ಎಲ್ಸೆ ಪೆರಿ ಮತ್ತು ರಿಚಾ ಘೋಷ್ ಬ್ಯಾಟಿಂಗ್ ನ ನೆರವಿನಿಂದ 20 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 150 ರನ್ ಗಳಿಸಿತು. ಎಲ್ಸೆ ಪೆರಿ 67, ರಿಚಾ ಘೋಷ್ ಬಿರುಸಿನ 37 ರನ್ ಗಳಿಸಿದರು.

ಈ ಮೊತ್ತ ಬೆನ್ನತ್ತಿದ ಡೆಲ್ಲಿ 19.4 ಓವರ್ ಗಳಲ್ಲಿ 4 ವಿಕೆಟ್ ಕಳೆದುಕೊಂಡು 154 ರನ್ ಗಳಿಸುವ ಮೂಲಕ 6 ವಿಕೆಟ್ ಗಳ ಗೆಲುವು ಸಂಪಾದಿಸಿತು. ಇದರೊಂದಿಗೆ ಸತತ ಐದನೇ ಸೋಲು ಕಂಡ ಆರ್ ಸಿಬಿ ಅತ್ಯಂತ ಕಳಪೆ ಪ್ರದರ್ಶನ ನೀಡಿದ ಕುಖ್ಯಾತಿಗೊಳಗಾಯಿತು.

Share this Story:

Follow Webdunia kannada

ಮುಂದಿನ ಸುದ್ದಿ

ಭಾರತ-ಆಸ್ಟ್ರೇಲಿಯಾ ನಾಲ್ಕನೇ ಟೆಸ್ಟ್ ಡ್ರಾ: ಟೀಂ ಇಂಡಿಯಾಗೆ ಸರಣಿ