Select Your Language

Notifications

webdunia
webdunia
webdunia
Wednesday, 9 April 2025
webdunia

ನಾನು ಇನ್ನೇನು ಮಾಡ್ಲಿ? ಪೂಜಾರ ಬೌಲಿಂಗ್ ನೋಡಿ ಅಶ್ವಿನ್ ಗೆ ತಲೆಬಿಸಿ!

ಚೇತೇಶ್ವರ ಪೂಜಾರ
ಅಹಮ್ಮದಾಬಾದ್ , ಮಂಗಳವಾರ, 14 ಮಾರ್ಚ್ 2023 (09:00 IST)
Photo Courtesy: Twitter
ಅಹಮ್ಮದಾಬಾದ್: ಆಸ್ಟ್ರೇಲಿಯಾ ವಿರುದ್ಧ ನಾಲ್ಕನೇ ಟೆಸ್ಟ್ ಪಂದ್ಯದ ಅಂತಿಮ ದಿನ ನಾಯಕ ರೋಹಿತ್ ಶರ್ಮಾ ತಮ್ಮ ತಂಡದ ಬ್ಯಾಟಿಗರಾದ ಚೇತೇಶ್ವರ ಪೂಜಾರ, ಶುಬ್ಮನ್ ಗಿಲ್ ಮುಂತಾದವರಿಗೆ ಬೌಲಿಂಗ್ ಅವಕಾಶ ನೀಡಿದ್ದರು.

ಹೇಗಿದ್ದರೂ ಪಂದ್ಯ ಡ್ರಾನತ್ತ ಸಾಗುತ್ತಿತ್ತು. ಹೀಗಾಗಿ ರೋಹಿತ್ ಶರ್ಮಾ ನೆರೆದಿದ್ದವರಿಗೆ ಮನರಂಜನೆ ಒದಗಿಸಲು ಬ್ಯಾಟರ್ ಗಳಿಗೆ ಬೌಲಿಂಗ್ ಅವಕಾಶ ನೀಡಿದ್ದರು. ಅದರಂತೆ ಚೇತೇಶ್ವರ ಪೂಜಾರ 1 ಓವರ್ ಸ್ಪಿನ್ ಬಾಲ್ ಮಾಡಿದ್ದರು. ವಿಶೇಷವೆಂದರೆ ಈ ಓವರ್ ನಲ್ಲಿ ಪೂಜಾರ ಕೇವಲ 1 ರನ್ ನೀಡಿದ್ದರು.

ಪೂಜಾರ ಬೌಲಿಂಗ್ ಮಾಡುತ್ತಿರುವ ಫೋಟೋವನ್ನು ಟ್ವೀಟ್ ಮಾಡಿದ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್, ಅಯ್ಯೋ, ಇನ್ನು ನಾನೇನು ಮಾಡ್ಲಿ? ಕೆಲಸ ಬಿಡ್ಲಾ? ಎಂದು ತಮಾಷೆ ಮಾಡಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಪೂಜಾರ ಇಲ್ಲ, ಇದು ನಿಮ್ಮಿಂದ ನಾಗ್ಪರದಲ್ಲಿ ಪಂದ್ಯ ಗೆದ್ದಿದ್ದಕ್ಕೆ ನಾವು ನೀಡಿದ ಬಹುಮಾನ ಎಂದಿದ್ದಾರೆ. ಇದಕ್ಕೆ ಉತ್ತರ ನೀಡಿರುವ ಅಶ್ವಿನ್, ನಿಮ್ಮ ಉದ್ದೇಶವೇನೋ ಮೆಚ್ಚುವಂತದ್ದೇ. ಆದರೆ ಅದಕ್ಕೆ ಇದು ಹೇಗೆ ಸಮನಾಗುತ್ತದೆ? ಎಂದು ತಮಾಷೆ ಮಾಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಡಬ್ಲ್ಯುಪಿಎಲ್: ಮತ್ತೊಂದು ಗೆಲುವಿನ ನಿರೀಕ್ಷೆಯಲ್ಲಿ ಮುಂಬೈ ಇಂಡಿಯನ್ಸ್