ಡಬ್ಲ್ಯುಪಿಎಲ್: ಮತ್ತೆ ಆರ್ ಸಿಬಿಗೆ ಕೈ ಕೊಟ್ಟ ಟಾಪ್ ಬ್ಯಾಟಿಗರು

Webdunia
ಸೋಮವಾರ, 6 ಮಾರ್ಚ್ 2023 (21:14 IST)
Photo Courtesy: Twitter
ಮುಂಬೈ: ಮುಂಬೈ ಇಂಡಿಯನ್ಸ್ ವಿರುದ್ಧದ ಡಬ್ಲ್ಯುಪಿಎಲ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಬ್ಯಾಟಿಂಗ್ ಮತ್ತೆ ಕಳೆಗುಂದಿದೆ.

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿದ ಆರ್ ಸಿಬಿ 18.4 ಓವರ್ ಗಳಲ್ಲಿ 155 ರನ್ ಗಳಿಗೆ ಆಲೌಟ್‍ ಆಗಿದೆ. ನಾಯಕಿ ಸ್ಮೃತಿ ಮಂಧನಾ 17 ಎಸೆತಗಳಿಂದ 23 ರನ್ ಗಳಿಸಿದರು. ಆದರೆ ಸೋಫೀ ಡಿವೈನ್ ಮತ್ತೆ ವಿಫಲರಾದರು. ಅವರ ಕೊಡುಗೆ 16 ರನ್. ದಿಶಾ ಕಸತ್ ಶೂನ್ಯ, ಎಲ್ಸೆ ಪೆರ್ರಿ 13 ರನ್ ಗೆ ರನೌಟ್ ಆದರು. ನಿರೀಕ್ಷೆ ಮೂಡಿಸಿದ್ದ ಹೀದರ್ ನೈಟ್ ಶೂನ್ಯಕ್ಕೆ ಔಟಾಗಿದ್ದು ಆರ್ ಸಿಬಿಗೆ ಹೊಡೆತ ನೀಡಿತು.

ರಿಚಾ ಘೋಷ್ ಎಚ್ಚರಿಕೆಯ ಆಟವಾಡಿ 28 ರನ್ ಗಳಿಸಿದರು. ಕನಿಕಾ ಅಹುಜಾ ಬಿರುಸಿನ 22 ರನ್, ಶ್ರೇಯಾಂಕ ಪಾಟೀಲ್ 23 ರನ್ ಗಳಿಸಿದರು. ಆದರೆ ಯಾರೂ ಸಿಕ್ಕ ಆರಂಭವನ್ನು ದೊಡ್ಡ ಮೊತ್ತ ಅಥವಾ ಜೊತೆಯಾಟವಾಗಿ ಪರಿವರ್ತಿಸಲು ವಿಫಲವಾಗಿದ್ದು ಆರ್ ಸಿಬಿ ದೊಡ್ಡ ಮೊತ್ತದ ಕನಸಿಗೆ ಹೊಡೆತ ನೀಡಿತು. ಮತ್ತೊಮ್ಮೆ ಹರ್ಮನ್ ಬಳಗ ಬೌಲಿಂಗ್ ನಲ್ಲಿ ತನ್ನ ಆಳ ಎಷ್ಟಿದೆ ಎಂಬುದನ್ನು ಸಾಬೀತುಪಡಿಸಿತು. ಇದೀಗ ಮುಂಬೈ ಗೆಲುವಿಗೆ 156 ರನ್ ಗಳಿಸಬೇಕಿದೆ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಅರ್ಷ್ ದೀಪ್ ಸಿಂಗ್ ಹೇಗೆ ಓಡ್ತಾರೆ... ವಿರಾಟ್ ಕೊಹ್ಲಿ ಅನುಕರಣೆ ನೋಡಿದ್ರೆ ನಗೋದು ಗ್ಯಾರಂಟಿ Video

IND vs NZ: ಭಾರತ ವರ್ಸಸ್ ನ್ಯೂಜಿಲೆಂಡ್ ಏಕದಿನ ಸರಣಿ ವೇಳಾಪಟ್ಟಿ, ಎಲ್ಲಿ ಲೈವ್ ವೀಕ್ಷಿಸಬೇಕು

ಆರ್ ಸಿಬಿ ಅಂದ್ರೇನೇ ಥ್ರಿಲ್ಲರ್: ಗೆಲುವಿನ ಬಳಿಕ ಸ್ಮೃತಿ ಮಂಧಾನ ಹೇಳಿಕೆ ವೈರಲ್

ಏನಪ್ಪಾ ಪ್ರಾಕ್ಟೀಸ್ ಮಾಡಕ್ಕೂ ಬಿಡಲ್ವಾ: ಕ್ಯಾಮರಾಮ್ಯಾನ್ ಮೇಲೆ ಸಿಟ್ಟಾದ ಸ್ಮೃತಿ ಮಂಧಾನ Video

WPL 2026: ಮುಂಬೈ ಬೌಲರ್ ಕೊನೆಯ ಎಸೆತದಲ್ಲಿ ಮಾಡಿದ ತಪ್ಪಿನ ಲಾಭ ಪಡೆದ ನಡಿನ್ ಡಿ ಕ್ಲರ್ಕ್ Video

ಮುಂದಿನ ಸುದ್ದಿ
Show comments