Webdunia - Bharat's app for daily news and videos

Install App

WPL 2025: ಆರ್ ಸಿಬಿ ಪಾಲಿಗೆ ಇಂದು ನಿಜವಾದ ಕ್ವೀನ್ ಎಲ್ಲಿಸ್ ಪೆರ್ರಿ

Krishnaveni K
ಶುಕ್ರವಾರ, 21 ಫೆಬ್ರವರಿ 2025 (21:09 IST)
Photo Credit: X
ಬೆಂಗಳೂರು: ಡಬ್ಲ್ಯುಪಿಎಲ್ ಕೂಟದಲ್ಲಿ ಇಂದು ಚಿನ್ನಸ್ವಾಮಿ ಮೈದಾನದಲ್ಲಿ ನಡೆಯುತ್ತಿರುವ ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಆರ್ ಸಿಬಿ ಪಾಲಿಗೆ ಎಲ್ಲಿಸ್ ಪೆರ್ರಿ ನಿಜವಾದ ಕ್ವೀನ್ ಆಗಿದ್ದಾರೆ.
 

ಟಾಸ್ ಸೋತು ಆರ್ ಸಿಬಿ ಇಂದು ಮೊದಲು ಬ್ಯಾಟಿಂಗ್ ಗಿಳಿಯಬೇಕಾಯಿತು. ಹೌಸ್ ಫುಲ್ ಸ್ಟೇಡಿಯಂ, ಎಲ್ಲೆಡೆ ಆರ್ ಸಿಬಿ ಕೂಗು ಮುಗಿಲು ಮುಟ್ಟಿತು. ಇದರ ನಡುವೆ ಬಹುಶಃ ಆರ್ ಸಿಬಿ ಬ್ಯಾಟಿಗರೂ ಮೈಮರೆತರೇನೋ.

ಹೀಗಾಗಿ ಬಿರುಸಿನ ಆಟವಾಡಿ ಪ್ರೇಕ್ಷಕರನ್ನು ರಂಜಿಸಲು ಹೋಗಿ ಆರ್ ಸಿಬಿ ಬ್ಯಾಟಿಗರನ್ನು ಬೇಗನೇ ವಿಕೆಟ್ ಕಳೆದುಕೊಂಡರು. ಹಾಗಿದ್ದರೂ ಸ್ಮೃತಿ ಮಂಧನಾ ಸ್ಪೋಟಕ ಆರಂಭ ನೀಡಿದರು. ಕೇವಲ 13 ಎಸೆತಗಳಿಂದ 26 ರನ್ ಸಿಡಿಸಿ ಔಟಾದರು. ಆದರೆ ಇನ್ನೊಬ್ಬ ಆರಂಭಿಕ ಆಟಗಾರ್ತಿ ಡ್ಯಾನಿ ವ್ಯಾಟ್ ಇಂದು ಕೇವಲ 9 ರನ್ ಗೆ ವಿಕೆಟ್ ಒಪ್ಪಿಸಿದರು. ಬಳಿಕ ಕನಿಕಾ ಅಹುಜಾ, ರಘ್ವಿ ಬಿಸ್ತ್ ಕೂಡಾ ಒಂದಂಕಿಗೆ ವಿಕೆಟ್ ಒಪ್ಪಿಸಿದಾಗ ತಂಡ ಸಂಕಷ್ಟಕ್ಕೀಡಾಯಿತು.

ಈ ವೇಳೆ ರಿಚಾ ಘೋಷ್ ಎಲ್ಲಿಸ್ ಪೆರ್ರಿ ಜೊತೆಗೂಡಿ ಚೇತರಿಕೆ ನೀಡಲು ಮುಂದಾದರು. ಆದರೆ ರಿಚಾ ಇನಿಂಗ್ಸ್ 28 ರನ್ ಗೆ ಕೊನೆಗೊಂಡಿತು. ಆರ್ ಸಿಬಿ ಪರ ಇಂದು ನಿಜವಾಗಿಯೂ ಕ್ವೀನ್ ಆಗಿದ್ದು ಎಲ್ಲಿಸ್ ಪೆರ್ರಿ. ಏಕಾಂಗಿಯಾಗಿ ತಂಡದ ಬ್ಯಾಟಿಂಗ್ ಜವಾಬ್ಧಾರಿ ಹೊತ್ತ ಎಲ್ಲಿಸ್ ಒಟ್ಟು 42 ಎಸೆತ ಎದುರಿಸಿ 81 ರನ್ ಗಳಿಸಿದರು. ತಮ್ಮಲ್ಲೇ ಸ್ಟ್ರೈಕ್ ಇಟ್ಟುಕೊಂಡು ಏಕಾಂಗಿಯಾಗಿ ತಂಡದ ರನ್ ಗಳಿಕೆಯ ಹೊಣೆ ಹೊತ್ತುಕೊಂಡಿದ್ದರು.

ಬಹುಶಃ ಇಂದು ಪೆರ್ರಿ ಇಲ್ಲದೇ ಹೋಗಿದ್ದರೆ ಆರ್ ಸಿಬಿ ಗೌರವಯುತ ಮೊತ್ತ ಗಳಿಸಲೂ ಸಾಧ್ಯವಾಗುತ್ತಿರಲಿಲ್ಲ. ಜೊತೆಗೆ ಮನಮೋಹಕ ಹೊಡೆತಗಳ ಮೂಲಕ ಆರ್ ಸಿಬಿ ಅಭಿಮಾನಿಗಳಿಗೂ ಭರ್ಜರಿ ಮನರಂಜನೆ ನೀಡಿದರು. ಅಂತಿಮವಾಗಿ ಆರ್ ಸಿಬಿ 20 ಓವರ್ ಗಳಲ್ಲಿ  7 ವಿಕೆಟ್ ನಷ್ಟಕ್ಕೆ 167 ರನ್ ಗಳಿಸಿತು. ಇದು ಎಲ್ಲಿಸ್ ಪೆರ್ರಿಯ ಡಬ್ಲ್ಯುಪಿಎಲ್ ಕೂಟದ ಗರಿಷ್ಠ ಸ್ಕೋರ್ ಆಗಿತ್ತು. ಅದ್ಭುತ ಇನಿಂಗ್ಸ್ ಆಡಿ ಕೊನೆಯ ಓವರ್ ನಲ್ಲಿ ಪೆರ್ರಿ ಔಟಾಗಿ ಮರಳುವಾಗ ಸ್ಟೇಡಿಯಂನಲ್ಲಿದ್ದ ಪ್ರೇಕ್ಷಕರು ಎದ್ದು ನಿಂತು ಅವರಿಗೆ ಗೌರವ ಸಲ್ಲಿಸಿದ್ದು ವಿಶೇಷವಾಗಿತ್ತು. ಜೊತೆಗೆ ಮುಂಬೈ ಇಂಡಿಯನ್ಸ್ ಎದುರು ಆರ್ ಸಿಬಿಯ ಗರಿಷ್ಠ ಮೊತ್ತವಾಗಿದೆ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ನಿವೃತ್ತಿ ವದಂತಿಯ ಬೆನ್ನಲ್ಲೇ ಲಾರ್ಡ್ಸ್‌ನಲ್ಲಿ ಏಕದಿನ ಸರಣಿಗಾಗಿ ಬ್ಯಾಟ್‌ ಹಿಡಿದ ಕಿಂಗ್‌ ಕೊಹ್ಲಿ

ಶುಭಮನ್ ಗಿಲ್ ಗೆ ಅನಾರೋಗ್ಯ, ಬ್ಲಡ್ ರಿಪೋರ್ಟ್ ಬಿಸಿಸಿಐಗೆ ಸಲ್ಲಿಸಿದ ಗಿಲ್

ಏಷ್ಯಾ ಕಪ್ ನಲ್ಲಿ ಟೀಂ ಇಂಡಿಯಾ ಜೆರ್ಸಿಗೆ ಪ್ರಾಯೋಜಕರೇ ಇರಲ್ವಾ

ಭಾರತ ಪಾಕಿಸ್ತಾನ ಕ್ರಿಕೆಟ್: ಪಹಲ್ಗಾಮ್ ನಲ್ಲಿ ಪತಿ ಮೃತದೇಹದ ಮುಂದೆ ಕೂತ ಮಹಿಳೆಯರ ಮರೆತು ಹೋಯ್ತಾ

ಭಾರತ ಪಾಕಿಸ್ತಾನ ಕ್ರಿಕೆಟ್ ಪ್ರೇಮಿಗಳಿಗೆ ಸಿಹಿ ಸುದ್ದಿ ನೀಡಿದ ಕೇಂದ್ರ ಸರ್ಕಾರ

ಮುಂದಿನ ಸುದ್ದಿ
Show comments