Select Your Language

Notifications

webdunia
webdunia
webdunia
webdunia

WPL 2024: ಡಬ್ಲ್ಯುಪಿಎಲ್ ನಾಳೆಯಿಂದ ಶುರು: ಎಷ್ಟು ಗಂಟೆಗೆ? ನೇರಪ್ರಸಾರ ಮಾಹಿತಿ ಇಲ್ಲಿದೆ

WPL 2024

Krishnaveni K

ಬೆಂಗಳೂರು , ಗುರುವಾರ, 22 ಫೆಬ್ರವರಿ 2024 (09:58 IST)
Photo Courtesy: Twitter
ಬೆಂಗಳೂರು: ಮಹಿಳೆಯರ ಐಪಿಎಲ್ ಎಂದೇ ಜನಪ್ರಿಯವಾಗಿರುವ ಡಬ್ಲ್ಯುಪಿಎಲ್ ಕೂಟದ ಎರಡನೇ ಆವೃತ್ತಿ ನಾಳೆಯಿಂದ ಆರಂಭವಾಗುತ್ತಿದೆ. ಈ ಕೂಟದ ಆರಂಭ ಸಮಯ, ನೇರಪ್ರಸಾರ ಇತ್ಯಾದಿ ಮಾಹಿತಿಗಾಗಿ ಇಲ್ಲಿ ಓದಿ.
 

ಈ ಬಾರಿಯೂ ಡಬ್ಲ್ಯುಪಿಎಲ್ ನಲ್ಲಿ ಒಟ್ಟು 5 ತಂಡಗಳು ಕಣಕ್ಕಿಳಿಯಲಿವೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು, ಮುಂಬೈ ಇಂಡಿಯನ್ಸ್, ಗುಜರಾತ್ ಜೈಂಟ್ಸ್, ಯುಪಿ ವಾರಿಯರ್ಸ್, ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಕಣದಲ್ಲಿವೆ. ಈ ಪೈಕಿ ಮುಂಬೈ ಮತ್ತು ಬೆಂಗಳೂರಿಗೆ  ಭಾರತೀಯರೇ ನಾಯಕಿಯರು. ಆರ್ ಸಿಬಿಗೆ ಸ್ಮೃತಿ ಮಂದಾನ, ಮುಂಬೈಗೆ ಹರ್ಮನ್ ಪ್ರೀತ್ ಕೌರ್ ನಾಯಕಿ.

ಕಳೆದ ವರ್ಷ ಡಬ್ಲ್ಯುಪಿಎಲ್ ಮೊದಲ ಆವೃತ್ತಿಯ ಎಲ್ಲಾ ಪಂದ್ಯಗಳೂ ಮುಂಬೈನಲ್ಲೇ ನಡೆದಿತ್ತು. ಈ ಆವೃತ್ತಿಯಲ್ಲಿ ಹರ್ಮನ್ ಪ್ರೀತ್ ಕೌರ್ ನೇತೃತ್ವದ ಮುಂಬೈ ಇಂಡಿಯನ್ಸ್ ಚಾಂಪಿಯನ್ ಆಗಿ ಹೊರಮ್ಮಿತ್ತು. ಆರ್ ಸಿಬಿಗೆ ಕಳೆದ ಸೀಸನ್ ತೀರಾ ಕಳಪೆಯಾಗಿತ್ತು. ಘಟಾನುಘಟಿ ಆಟಗಾರರಿದ್ದೂ ಆರ್ ಸಿಬಿ ಹೀನಾಯ ಸೋಲು ಅನುಭವಿಸಿತ್ತು. ಆದರೆ ಈ ಬಾರಿ ತಂಡ ಹೆಚ್ಚು ಸಮತೋಲಿತವಾಗಿದ್ದು, ಉತ್ತಮ ಪ್ರದರ್ಶನ ನೀಡಲಿರುವುದಾಗಿ ನಾಯಕಿ ಸ್ಮೃತಿ ಮಂದಾನ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ವಿಶೇಷವೆಂದರೆ ಈ ಬಾರಿ ಬೆಂಗಳೂರಿನಲ್ಲೂ ಪಂದ್ಯಗಳು ನಡೆಯಲಿವೆ. ನಾಳೆ ಟೂರ್ನಿಯ ಉದ್ಘಾಟನಾ ಪಂದ್ಯವೇ ಬೆಂಗಳೂರಿನ ಚಿನ್ನಸ್ವಾಮಿ ಮೈದಾನದಲ್ಲಿ ನಡೆಯುತ್ತಿದೆ. ಆರಂಭಿಕ ಹಂತದ ಪಂದ್ಯಗಳು ಬೆಂಗಳೂರಿನಲ್ಲಿ ಮತ್ತು ಅಂತಿಮ ಹಂತದ ಪಂದ್ಯಗಳು ಮುಂಬೈನಲ್ಲಿ ನಡೆಯಲಿದೆ. ಕಳೆದ ವರ್ಷ ಡಬ್ಲ್ಯುಪಿಎಲ್ ಗೆ ಹೆಚ್ಚಿನ ಜನ ಆಸಕ್ತಿ ತೋರಿದ್ದರಿಂದ ಈ ಬಾರಿ ಎರಡು ತಾಣಗಳಲ್ಲಾಗಿ ಪಂದ್ಯ ಆಯೋಜಿಸಲಾಗಿದೆ.

ಆರಂಭಿಕ ಪಂದ್ಯದಲ್ಲಿ ನಾಳೆ ಹಾಲಿ ಚಾಂಪಿಯನ್ಸ್ ಮುಂಬೈ ಇಂಡಿಯನ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ಸೆಣಸಾಡಲಿವೆ. ಕಳೆದ ಆವೃತ್ತಿಯಲ್ಲಿ ಈ ಎರಡೂ ತಂಡಗಳು ಅಗ್ರ ಪ್ರದರ್ಶನ ನೀಡಿದ್ದವು. ಹೆಚ್ಚಿನ ಎಲ್ಲಾ ಪಂದ್ಯಗಳೂ ರಾತ್ರಿ 7.30 ಕ್ಕೆ ಆರಂಭವಾಗಲಿದೆ. ಎಲ್ಲಾ ಪಂದ್ಯಗಳ ನೇರಪ್ರಸಾರವನ್ನು ಜಿಯೋ ಸಿನಿಮಾದಲ್ಲಿ ವೀಕ್ಷಿಸಬಹುದಾಗಿದೆ.
 

Share this Story:

Follow Webdunia kannada

ಮುಂದಿನ ಸುದ್ದಿ

IPL 2024: ಐಪಿಎಲ್ 2024 ರ ವೇಳಾಪಟ್ಟಿ ಇಂದು ಸಂಜೆ ಪ್ರಕಟ