Select Your Language

Notifications

webdunia
webdunia
webdunia
webdunia

WPL 2024: ಚಿನ್ನಸ್ವಾಮಿಯಲ್ಲಿ ಸ್ಮೃತಿ ಮಂದಾನಗೆ ಚಿಯರ್ ಬಲು ಜೋರು

WPL 2024

Krishnaveni K

ಬೆಂಗಳೂರು , ಶುಕ್ರವಾರ, 23 ಫೆಬ್ರವರಿ 2024 (20:15 IST)
Photo Courtesy: Twitter
ಬೆಂಗಳೂರು: ಡಬ್ಲ್ಯುಪಿಎಲ್ 2 ಟೂರ್ನಿಗೆ ಚಿನ್ನಸ್ವಾಮಿ ಮೈದಾನದಲ್ಲಿ ಚಾಲನೆ ಸಿಕ್ಕಿದೆ. ಎಲ್ಲಾ ಐದೂ ತಂಡಗಳ ನಾಯಕರ ಸಮ್ಮುಖದಲ್ಲಿ, ಪ್ರೇಕ್ಷಕರಿಂದ ಭರ್ತಿಯಾಗಿದ್ದ ಮೈದಾನದಲ್ಲಿ ಮಹಿಳೆಯರ ಕ್ರಿಕೆಟ್ ಲೀಗ್ ಆರಂಭವಾಗಿದೆ.

ಎರಡನೇ ಸೀಸನ್ ಆರಂಭಕ್ಕೆ ಮೊದಲು ಬಾಲಿವುಡ್ ನಟರಿಂದ ನೃತ್ಯ, ಮನರಂಜನಾ ಕಾರ್ಯಕ್ರಮಗಳು ನಡೆದವು. ಚಿನ್ನಸ್ವಾಮಿ ಮೈದಾನದಲ್ಲಿ ಕ್ರಿಕೆಟ್ ಎಂದರೆ ಕೇಳಬೇಕೇ? ಅಭಿಮಾನಿಗಳು ಕಿಕ್ಕಿರಿದು ಕೂತಿದ್ದರು. ಜೊತೆಗೆ ಶಾರುಖ್ ಖಾನ್, ವರುಣ್ ಧವನ್, ಸಿದ್ದಾರ್ಥ್ ಮಲ್ಹೋತ್ರಾ ಸೇರಿದಂತೆ ಬಾಲಿವುಡ್ ನಟರಿಂದ ಜನಪ್ರಿಯ ಹಾಡುಗಳಿಗೆ ನೃತ್ಯವೂ ಇದ್ದಿದ್ದರಿಂದ ಪ್ರೇಕ್ಷಕರು ಫುಲ್ ಎಂಜಾಯ್ ಮಾಡಿದರು.

ಕಳೆದ ಬಾರಿ ಮುಂಬೈನ ವಾಂಖೆಡೆ ಮೈದಾನದಲ್ಲಿ ಟೂರ್ನಿ ನಡೆದಿತ್ತು. ಆದರೆ ಚಿನ್ನಸ್ವಾಮಿ ಅಂಗಣದಲ್ಲಿ ಸಿಕ್ಕಷ್ಟು ಪ್ರೇಕ್ಷಕರ ಬೆಂಬಲ ಅಲ್ಲಿ ಸಿಕ್ಕಿರಲಿಲ್ಲ. ಈ ಬಾರಿ ಆರಂಭಿಕ ಹಂತದ ಪಂದ್ಯಗಳು ಚಿನ್ನಸ್ವಾಮಿಯಲ್ಲಿ ಮತ್ತು ಅಂತಿಮ ಹಂತದ ಪಂದ್ಯಗಳು ಮುಂಬೈನಲ್ಲಿ ನಡೆಯುತ್ತಿವೆ.

ಚಿನ್ನಸ್ವಾಮಿ ಅಂಗಣದಲ್ಲಿ ಆರ್ ಸಿಬಿ ನಾಯಕಿ ‘ಕ್ವೀನ್’ ಸ್ಮೃತಿ ಮಂದಾನ ಸ್ಟೇಡಿಯಂಗೆ ಬರುತ್ತಿದ್ದಂತೇ ಪ್ರೇಕ್ಷಕರಿಂದ ಭಾರೀ ಹರ್ಷೋದ್ಗಾರ ಕಂಡುಬಂತು. ಆರ್ ಸಿಬಿ ಅಭಿಮಾನಿಗಳಷ್ಟು ವಿಧೇಯ ಅಭಿಮಾನಿಗಳು ಇನ್ನೊಬ್ಬರಿಲ್ಲ ಎಂದು ಪ್ರೇಕ್ಷಕರು ಸಾಬೀತುಪಡಿಸಿದರು.

ಇಂದು ಮೊದಲ ಪಂದ್ಯದಲ್ಲಿ ಮುಂಬೈ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ಮುಖಾಮುಖಿಯಾಗುತ್ತಿದೆ. ಟಾಸ್ ಗೆದ್ದ ಮುಂಬೈ ಇಂಡಿಯನ್ಸ್ ಮೊದಲು ಫೀಲ್ಡಿಂಗ್ ಆಯ್ದುಕೊಂಡಿದೆ. ಡೆಲ್ಲಿ ಇತ್ತೀಚೆಗಿನ ವರದಿ ಬಂದಾಗ 5 ಓವರ್ ಗಳಲ್ಲಿ 1 ವಿಕೆಟ್ ನಷ್ಟಕ್ಕೆ 23 ರನ್ ಗಳಿಸಿದೆ.

Share this Story:

Follow Webdunia kannada

ಮುಂದಿನ ಸುದ್ದಿ

IND vs ENG test: ಜೋ ರೂಟ್ ಶತಕ, 300 ದಾಟಿದ ಇಂಗ್ಲೆಂಡ್