ವಿಶ್ವಕಪ್ 2019: ಟೀಂ ಇಂಡಿಯಾ ಆಡುವ ಪಂದ್ಯಗಳು ಭಾನುವಾರವೇ ಏಕೆ?

ಭಾನುವಾರ, 30 ಜೂನ್ 2019 (09:15 IST)
ಲಂಡನ್: ವಿಶ್ವಕಪ್ ಇರಲಿ, ಪ್ರಮುಖ ಐಸಿಸಿ ಟೂರ್ನಿಗಳು ಯಾವುದೇ ಇರಲಿ, ಟೀಂ ಇಂಡಿಯಾ ಆಡುವ ಪಂದ್ಯಗಳನ್ನು ಹೆಚ್ಚಾಗಿ ಭಾನುವಾರ ಅಥವಾ ವಾರಂತ್ಯಗಳಲ್ಲೇ ಆಯೋಜಿಸಲಾಗುತ್ತದೆ.


ಈ ವಿಶ್ವಕಪ್ ಕೂಟದಲ್ಲೇ ಭಾರತ ಇಂದಿನ ಪಂದ್ಯ ಸೇರಿ ಏಳನೇ ಪಂದ್ಯವಾಡುತ್ತಿದ್ದು, ಇವುಗಳ ಪೈಕಿ ಮೂರು ಪಂದ್ಯಗಳು ಭಾನುವಾರ ಮತ್ತು ಒಂದು ಶನಿವಾರ ಆಯೋಜಿಸಲಾಗಿದೆ. ಇದಕ್ಕೆ ಕಾರಣ ಭಾರತೀಯ ಅಭಿಮಾನಿಗಳ ಕ್ರಿಕೆಟ್ ಮೇಲಿನ ಪ್ರೀತಿ.

ಭಾರತ ಯಾವುದೇ ತಂಡದ ವಿರುದ್ಧ ಆಡುವುದಿದ್ದರೂ ಪ್ರೇಕ್ಷಕರು ಮೈದಾನಕ್ಕೆ ಬಂದೇ ಬರುತ್ತಾರೆ. ಟಿವಿಯಲ್ಲಿ ವೀಕ್ಷಿಸುವವರ ಸಂಖ್ಯೆಗೂ ಕಮ್ಮಿಯಿಲ್ಲ. ಹೀಗಾಗಿ ಆಯೋಜಕರಿಗೆ ಭಾರತ ಆಡುವ ಪಂದ್ಯಗಳಿಂದ ಹೆಚ್ಚಿನ ಲಾಭ ಗಳಿಸಬಹುದು. ಇನ್ನು, ಟಿವಿ ಜಾಹೀರಾತುಗಳಿಂದಲೂ ಹೆಚ್ಚಿನ ಆದಾಯ ಬರುವುದರಿಂದ ಭಾರತ ಆಡುವ ಹೆಚ್ಚಿನ ಪಂದ್ಯಗಳನ್ನೂ ಭಾನುವಾರ ಅಥವಾ ವಾರಂತ್ಯಗಳಲ್ಲೇ ಆಯೋಜಿಸಲಾಗುತ್ತಿದೆ.

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ವಿಶ್ವಕಪ್ 2019: ಇಂದು ಟೀಂ ಇಂಡಿಯಾದ ಗೆಲುವಿನ ಮೇಲೆ ಮೂರು ತಂಡಗಳ ಭವಿಷ್ಯ ನಿಂತಿದೆ!