Daily Horoscope
✕

ವಿಶ್ವಕಪ್ ಫೈನಲ್: ಕೈ ಜಾರಿ ಹೋಯ್ತು ಕಪ್, ಅಭಿಮಾನಿಗಳ ಹೃದಯ ಚೂರು ಚೂರು

Webdunia
ಭಾನುವಾರ, 19 ನವೆಂಬರ್ 2023 (21:22 IST)
Photo Courtesy: Twitter
ಅಹಮ್ಮದಾಬಾದ್: ಭಾರತ ಈ ಬಾರಿ ವಿಶ್ವಕಪ್ ಗೆದ್ದೇ ಗೆಲ್ಲುತ್ತದೆ ಎಂಬ ವಿಶ್ವಾಸದಲ್ಲಿದ್ದ ಕೋಟ್ಯಾಂತರ ಭಾರತೀಯರ ಕನಸು ಚೂರು ಚೂರಾಗಿದೆ.

ಮತ್ತೊಮ್ಮೆ ಆಸ್ಟ್ರೇಲಿಯಾ ಎದುರು ಫೈನಲ್ ನಲ್ಲಿ ಸೋತು ಮಂಡಿಯೂರಿ ಕುಳಿತಿದೆ. ಆರಂಭದಿಂದಲೂ ಆಸ್ಟ್ರೇಲಿಯಾ ಸೇರಿದಂತೆ ಎಲ್ಲಾ ತಂಡಗಳಿಗೆ ಸೋಲುಣಿಸುತ್ತಲೇ ಬಂದಿದ್ದ ಟೀಂ ಇಂಡಿಯಾ ಬೇಕಾಗಿದ್ದಾಗಲೇ ಎಲ್ಲಾ ವಿಭಾಗಗಳಲ್ಲೂ ಕೈಕೊಟ್ಟು ಕ್ರಿಕೆಟ್ ಪ್ರೇಮಿಗಳ ಕನಸು ಭಗ್ನಗೊಳಿಸಿದೆ.

ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ ಗಳಿಸಿದ್ದು ಕೇವಲ 240 ರನ್. ಗೆಲುವಿಗೆ ಕೇವಲ 241 ರನ್ ಗಳಿಸಬೇಕಿದ್ದರೂ ಭಾರತೀಯ ಬೌಲರ್ ಗಳ ಮೇಲೆ ವಿಶ್ವಾಸವಿತ್ತು. ಯಾಕೆಂದರೆ ಇದೇ ಟೂರ್ನಿಯಲ್ಲಿ ಇದಕ್ಕಿಂತ ಮೊದಲು ಈ ರೀತಿ ಸಣ್ಣ ಮೊತ್ತವನ್ನೂ ಟೀಂ ಇಂಡಿಯಾ ಯಶಸ್ವಿಯಾಗಿ ರಕ್ಷಿಸಿಕೊಂಡಿತ್ತು.

ಆದರೆ ಇಂದು ಹಾಗೆ ಆಗಲೇ ಇಲ್ಲ. ವಿಶ್ವಕಪ್ ಗೆಲ್ಲುವುದು ಕಲೆ ಆಗಿದ್ದರೆ ಆ ಕಲೆಯಲ್ಲಿ ತಾವು ಮಾಸ್ಟರ್ ಎಂಬುದನ್ನು ಆಸ್ಟ್ರೇಲಿಯಾ ಮತ್ತೊಮ್ಮೆ ನಿರೂಪಿಸಿತು. 43 ಓವರ್ ಗಳಲ್ಲಿ ಕೇವಲ 4 ವಿಕೆಟ್ ಕಳೆದುಕೊಂಡು 241 ರನ್ ಗಳಿಸಿದ ಆಸ್ಟ್ರೇಲಿಯಾ 6 ವಿಕೆಟ್ ಗಳ ಜಯ ಗಳಿಸಿ ಆರನೇ ಬಾರಿಗೆ ವಿಶ್ವಕಪ್ ಕಿರೀಟವನ್ನು ತನ್ನದಾಗಿಸಿಕೊಂಡಿತು. ಇದರೊಂದಿಗೆ ಸ್ಟೇಡಿಯಂನಲ್ಲಿದ್ದ ಲಕ್ಷಾಂತರ ಪ್ರೇಕ್ಷಕರು ಮೌನಕ್ಕೆ ಜಾರುವಂತೆ ಮಾಡಿತು. ನಿನ್ನೆಯಷ್ಟೇ ಆಸೀಸ್ ನಾಯಕ ಪ್ಯಾಟ್ ಕ್ಯುಮಿನ್ಸ್ ಮೈದಾನದಲ್ಲಿರುವ ಲಕ್ಷಾಂತರ ಭಾರತೀಯ ಪ್ರೇಕ್ಷಕರ ಸದ್ದಡಗಿಸುವ ಮಜವೇ ಬೇರೆ ಎಂದಿದ್ದರು. ನುಡಿದಂತೆ ನಡೆಯುವ ಮೂಲಕ ಎಲ್ಲರ ನಿರೀಕ್ಷೆಯನ್ನು ಆಸೀಸ್ ತಲೆಕೆಳಗೆ ಮಾಡಿತು. ಆಸೀಸ್ ಪರ ಶತಕ ಸಿಡಿಸಿದ ಟ್ರಾವಿಸ್ ಹೆಡ್ 137 ರನ್ ಚಚ್ಚಿದರು. ಲಬುಶೇನ್ ಅಜೇಯ 58 ರನ್ ಗಳಿಸಿದರು.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

Asian Games 2026: ಪಾಕಿಸ್ತಾನಿಗಳನ್ನು ಚಚ್ಚಿ ಹಾಕಿದ ಅಭಿಷೇಕ್ ಶರ್ಮಾ, ತಿಲಕ್ ವರ್ಮ

Asian Games 2026: ಭಾರತ vs ಪಾಕಿಸ್ತಾನ ಹೈ-ವೋಲ್ಟೇಜ್ ಪಂದ್ಯ; ಟಾಸ್ ಗೆದ್ದ ಬಳಿಕ ಉಭಯ ನಾಯಕರು ಕೈಕಲುಕಿದ್ರಾ ನೋಡಿ

Asian Games 2026: 17ರ ಹರೆಯದಲ್ಲೇ ಚಾರಿತ್ರಿಕ ಸಾಧನೆ; ಆರ್ಚರಿಯಲ್ಲಿ ಚಿನ್ನ ಗೆದ್ದು ಇತಿಹಾಸ ಬರೆದ ಕುಮ್‌ಕುಮ್ ಮೊಹೋದ್

ಐಸಿಸಿ ಏಕದಿನ ವಿಶ್ವಕಪ್ 2027 ವೇಳಾಪಟ್ಟಿ ಪ್ರಕಟ: ಭಾರತ vs ಪಾಕಿಸ್ತಾನ ಹೈ-ವೋಲ್ಟೇಜ್ ಪಂದ್ಯದ ದಿನಾಂಕ ಮತ್ತು ಮೈದಾನ ಇಲ್ಲಿದೆ

ಕೆಎಲ್ ರಾಹುಲ್ ಗೆ ಟೀಂ ಇಂಡಿಯಾದಲ್ಲಿ ಇದೆಂಥಾ ಅನ್ಯಾಯ

ಮುಂದಿನ ಸುದ್ದಿ
Show comments