Webdunia - Bharat's app for daily news and videos

Install App

ವಿಶ್ವಕಪ್ 2023 ಫೈನಲ್: ವಿಶ್ವಕಪ್ ಟ್ರೋಫಿಗೆ ಅವಮಾನ ಮಾಡಿದ ಆಸೀಸ್ ಕ್ರಿಕೆಟಿಗ ಮಿಚೆಲ್ ಮಾರ್ಷ್

Webdunia
ಸೋಮವಾರ, 20 ನವೆಂಬರ್ 2023 (10:47 IST)
Photo Courtesy: Twitter
ಅಹಮ್ಮದಾಬಾದ್: ವಿಶ್ವಕಪ್ 2023 ಫೈನಲ್ ಪಂದ್ಯ ಗೆದ್ದ ಆಸ್ಟ್ರೇಲಿಯಾ ಆಟಗಾರರ ಸಂಭ್ರಮ ಮುಗಿಲು ಮುಟ್ಟಿತ್ತು. ಆದರೆ ಈ ನಡುವೆ ಕ್ರಿಕೆಟಿಗ ಮಿಚೆಲ್ ಮಾರ್ಷ್ ಕಪ್ ಗೆ ಅವಮಾನ ಮಾಡಿದ ಪ್ರಕರಣ ನಡೆದಿದೆ.

ಟೂರ್ನಮೆಂಟ್ ಗೆದ್ದ ಖುಷಿಯಲ್ಲಿ ಮಿಚೆಲ್ ಮಾರ್ಚ್ ಡ್ರೆಸ್ಸಿಂಗ್ ರೂಂನಲ್ಲಿ ವಿಶ್ವಕಪ್ ಮೇಲೆ ಕಾಲೆತ್ತಿ ಹಾಕಿ ಕುಳಿತು ಥಮ್ಸ್ ಅಪ್ ಮಾಡುತ್ತಿರುವ ಫೋಟೋವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಈ ಫೋಟೋ ನೋಡಿ ನೆಟ್ಟಿಗರು ಕನಿಷ್ಠ ಪಕ್ಷ ನಿಮ್ಮ ಪರಿಶ್ರಮಕ್ಕಾದರೂ ಬೆಲೆ ಕೊಡಿ. ಅದು ವಿಶ್ವಕಪ್. ಅದಕ್ಕಾದರೂ ಬೆಲೆ ಬೇಡವೇ? ಅದರ ಮೇಲೆಯೇ ಕಾಲು ಇಟ್ಟು ಕೂತಿದ್ದೀರಲ್ಲಾ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ವಿಶ್ವಕಪ್ ಗೆ ಹೇಗೆ ಗೌರವ ಕೊಡಬೇಕು ಎಂದು ಭಾರತೀಯರನ್ನು ನೋಡಿ ಕಲಿಯಿರಿ ಎಂದು ಧೋನಿ, ಸಚಿನ್ ಈ ಹಿಂದೆ ಗೆದ್ದಾಗ ಕಪ್ ಗೆ ಮುತ್ತಿಕ್ಕಿ ಗೌರವ ಸಲ್ಲಿಸಿದ ಫೋಟೋ ಪ್ರಕಟಿಸಿ ಟಾಂಗ್ ಕೊಟ್ಟಿದ್ದಾರೆ.

ಕಳೆದ ಬಾರಿ ಇಂಗ್ಲೆಂಡ್ ವಿಶ್ವಕಪ್ ಗೆದ್ದಾಗ ಶೂಗೆ ವೈನ್ ಹಾಕಿ ಕುಡಿದು ಸಂಭ್ರಮಿಸಿದ್ದರು. ಇದು ಅವರ ಸಂಪ್ರದಾಯವಾಗಿದ್ದರೂ ಅವರ ಈ ಅತಿರೇಕದ ವರ್ತನೆಗೆ ಭಾರೀ ಟೀಕೆ ವ್ಯಕ್ತವಾಗಿತ್ತು.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

IND vs AFG: ಅಫ್ಘಾನಿಸ್ತಾನ ವಿರುದ್ಧ ಇಂದು ಸಂಜು ಸ್ಯಾಮ್ಸನಾ, ವೈಭವ್ ಸೂರ್ಯವಂಶಿನಾ

ಏಷ್ಯಾ ಕಪ್ ವಿಜೇತ ಭಾರತ ಮಹಿಳಾ ಕ್ರಿಕೆಟ್ ತಂಡ ವಿಮಾನ ನಿಲ್ದಾಣಕ್ಕೆ ಬಂದಿಳಿಯುತ್ತಿದ್ದಂತೇ ಎಂಥಾ ಸ್ವಾಗತ ಸಿಕ್ತು ನೋಡಿ Video

ನಿಮ್ಮ ಕೈಲಿ ನಾವು ಟ್ರೋಫಿ ತಗೊಳ್ಳಲ್ಲ ಎಂದು ಹೇಳಿದ್ರೂ ವೇದಿಕೆಗೆ ಬಂದಿದ್ದ ಮೊಹ್ಸಿನ್ ನಖ್ವಿ: ಗರಂ ಆಗಿರುವ ಬಿಸಿಸಿಐ

ಟ್ರೋಫಿಗಾಗಿ ಹೈಡ್ರಾಮಾದ ಬೆನ್ನಲ್ಲೇ ಭಾರತೀಯ ಮಹಿಳಾ ತಂಡದ ಸಾಧನೆಯನ್ನು ಕೊಂಡಾಡಿದ ಪ್ರಧಾನಿ ನರೇಂದ್ರ ಮೋದಿ

Video: ಅಘ್ಗಾನಿಸ್ತಾನ ವಿರುದ್ಧದ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಮೊದಲ ಬಾರಿಗೆ ಮೊಳಗಿದ ವಂದೇ ಮಾತರಂ

ಮುಂದಿನ ಸುದ್ದಿ
Show comments