Publish Date: Fri, 05 Jul 2019 (10:18 IST)
Updated Date: Fri, 05 Jul 2019 (10:21 IST)
ಲಂಡನ್: ನಾಳೆ ವಿಶ್ವಕಪ್ ಕೂಟದಲ್ಲಿ ಭಾರತ ಮತ್ತು ಶ್ರೀಲಂಕಾ ನಡುವೆ ಪಂದ್ಯ ನಡೆಯಲಿದ್ದು, ಈ ಔಪಚಾರಿಕ ಪಂದ್ಯಕ್ಕೆ ಮೊದಲು ಟೀಂ ಇಂಡಿಯಾ ಕ್ರಿಕೆಟಿಗರು ಲೀಡ್ಸ್ ನಗರದ ಸುತ್ತಾಟ ನಡೆಸಿದ್ದಾರೆ.
ಈಗಾಗಲೇ ಟೀಂ ಇಂಡಿಯಾ ಸೆಮಿಫೈನಲ್ ಗೇರಿರುವುದರಿಂದ ಭಾರತಕ್ಕೆ ಈ ಪಂದ್ಯ ಮಹತ್ವದ್ದೇನಲ್ಲ. ಅಲ್ಲದೆ ಇದು ಕೊನೆಯ ಲೀಗ್ ಪಂದ್ಯವಾಗಿದ್ದು, ಸೆಮಿಫೈನಲ್ ಗೆ ಮೊದಲು ರಿಹರ್ಸಲ್ ನಡೆಸಲು ಸಿಕ್ಕ ಅವಕಾಶ ಎನ್ನಬಹುದು.
ಆದರೆ ಭಾರತೀಯ ಆಟಗಾರರು ಎಷ್ಟೇ ಟೀಕೆ ವ್ಯಕ್ತವಾದರೂ ತಿರುಗಾಡುವುದನ್ನು ಮಾತ್ರ ನಿಲ್ಲಿಸುವಂತೆ ಕಾಣುತ್ತಿಲ್ಲ. ಸಿಕ್ಕ ಸಣ್ಣ ಬಿಡುವಿನ ಅವಧಿಯಲ್ಲಿ ಪ್ರಾಕ್ಟೀಸ್ ಮಾಡುವುದನ್ನು ಬಿಟ್ಟು ನಾಯಕ ವಿರಾಟ್ ಕೊಹ್ಲಿ ಧೋನಿ, ಹಾರ್ದಿಕ್ ಪಾಂಡ್ಯ ಸೇರಿದಂತೆ ಪ್ರಮುಖ ಆಟಗಾರರು ನಿನ್ನೆಯಿಡೀ ಲೀಡ್ಸ್ ನಲ್ಲಿ ಸುತ್ತಾಟ ನಡೆಸಿ ರಿಲ್ಯಾಕ್ಸ್ ಮಾಡಿದ್ದಾರೆ. ಬಹುಶಃ ಇಂದು ಅಭ್ಯಾಸಕ್ಕಿಳಿಯುವ ಸಾಧ್ಯತೆಯಿದೆ.