Select Your Language

Notifications

webdunia
webdunia
webdunia
webdunia

ವಿಶ್ವಕಪ್ 2019: ರೋಹಿತ್ ಶರ್ಮಾ ಮಾಡಿದ ವಿಶ್ವದಾಖಲೆಗಳು

ವಿಶ್ವಕಪ್ 2019: ರೋಹಿತ್ ಶರ್ಮಾ ಮಾಡಿದ ವಿಶ್ವದಾಖಲೆಗಳು
ಲಂಡನ್ , ಭಾನುವಾರ, 7 ಜುಲೈ 2019 (09:20 IST)
ಲಂಡನ್: ಭಾರತ ಮತ್ತು ಶ್ರೀಲಂಕಾ ನಡುವೆ ನಿನ್ನೆ ನಡೆದ ವಿಶ್ವಕಪ್ ಕೂಟದ ಕೊನೆಯ ಲೀಗ್ ಪಂದ್ಯದಲ್ಲಿ ಟೀಂ ಇಂಡಿಯಾ ಲಂಕಾ ವಿರುದ್ಧ 7 ವಿಕೆಟ್ ಗಳ ಭರ್ಜರಿ ಜಯ ಗಳಿಸಿದೆ.


ಮೊದಲು ಬ್ಯಾಟಿಂಗ್ ಮಾಡಿದ ಲಂಕಾ ನಿಗದಿತ 50 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 264 ರನ್ ಗಳಿಸಿತು. ಇದಕ್ಕೆ ಉತ್ತರವಾಗಿ ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ ಆರಂಭಿಕರಾದ ಕೆಎಲ್ ರಾಹುಲ್ ಮತ್ತು ರೋಹಿತ್ ಶರ್ಮಾ ಭರ್ಜರಿ ಶತಕಗಳ ನೆರವಿನಿಂದ 43.3. ಓವರ್ ಗಳಲ್ಲಿ 3 ವಿಕೆಟ್ ಕಳೆದುಕೊಂಡು 265 ರನ್ ಗಳಿಸಿ ಗೆಲುವಿನ ನಗೆ ಬೀರಿತು.

ಈ ಪಂದ್ಯದಲ್ಲಿ ರೋಹಿತ್ ಶರ್ಮಾ ಮತ್ತೊಂದು ಶತಕ ಸಿಡಿಸುವ ಮೂಲಕ ಹಲವು ವಿಶ್ವದಾಖಲೆ ಮಾಡಿದರು. ಈ ವಿಶ್ವಕಪ್ ಕೂಟದಲ್ಲೇ ರೋಹಿತ್ ರ ಐದನೇ ಶತಕ ಇದಾಗಿತ್ತು. ಈ ಮೂಲಕ ಒಂದೇ ವಿಶ್ವಕಪ್ ನಲ್ಲಿ ಗರಿಷ್ಠ ಶತಕ ಸಿಡಿಸಿದ್ದ ಕುಮಾರ್ ಸಂಗಕ್ಕಾರ ದಾಖಲೆ ಮುರಿದರು. ಅಲ್ಲದೆ, ಒಟ್ಟಾರೆ ವಿಶ್ವಕಪ್ ಕೂಟಗಳಲ್ಲಿ ಗರಿಷ್ಠ 6 ಶತಕ ಸಿಡಿಸಿದ್ದ ಸಚಿನ್ ತೆಂಡುಲ್ಕರ್ ವಿಶ್ವದಾಖಲೆಯನ್ನು ಸರಿಗಟ್ಟಿದರು.

ಅಲ್ಲದೆ, ಕೆಎಲ್ ರಾಹುಲ್ ಕೂಡಾ ಈ ಪಂದ್ಯದಲ್ಲಿ (111) ಶತಕ ಸಿಡಿಸಿದ್ದು, ರೋಹಿತ್ ಜತೆಗೆ 189 ರನ್ ಗಳ ಮೊದಲ ವಿಕೆಟ್ ಜತೆಯಾಟವಾಡಿದರು. ಈ ಮೂಲಕ ವಿಶ್ವಕಪ್ ನಲ್ಲಿ ಗರಿಷ್ಠ ಆರಂಭಿಕ ಜತೆಯಾಟದ ದಾಖಲೆ ಮಾಡಿದರು.

ಇನ್ನೊಂದು ಪಂದ್ಯದಲ್ಲಿ ದ.ಆಫ್ರಿಕಾ ತಂಡ ಆಸ್ಟ್ರೇಲಿಯಾವನ್ನು ಸೋಲಿಸಿದ್ದು ಭಾರತಕ್ಕೆ ಸೆಮಿಫೈನಲ್ ನಲ್ಲಿ ನ್ಯೂಜಿಲೆಂಡ್ ಎದುರಾಳಿಯಾಗಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ವಿಶ್ವಕಪ್ 2019: ಟಾಸ್ ಗೆದ್ದ ಲಂಕಾ, ಟೀಂ ಇಂಡಿಯಾದಲ್ಲಿ ಎರಡು ಬದಲಾವಣೆ