Publish Date: Sat, 06 Jul 2019 (14:41 IST)
Updated Date: Sat, 06 Jul 2019 (14:43 IST)
ಲಂಡನ್: ವಿಶ್ವಕಪ್ ಕೂಟದ ಕೊನೆಯ ಲೀಗ್ ಪಂದ್ಯದಲ್ಲಿ ಇಂದು ಭಾರತ ಮತ್ತು ಶ್ರೀಲಂಕಾ ಮುಖಾಮುಖಿಯಾಗುತ್ತಿದ್ದು, ಟಾಸ್ ಗೆದ್ದ ಲಂಕಾ ಮೊದಲು ಬ್ಯಾಟಿಂಗ್ ಆಯ್ದುಕೊಂಡಿದೆ.
ಭಾರತದ ಪಾಲಿಗೆ ಇದು ಔಪಚಾರಿಕ ಪಂದ್ಯವಾದರೆ ಅತ್ತ ಲಂಕಾಗೆ ಗೆಲುವಿನೊಂದಿಗೆ ಟೂರ್ನಿಗೆ ವಿದಾಯ ಹೇಳುವ ತವಕ. ಇಂದಿನ ಪಂದ್ಯಕ್ಕೆ ಭಾರತ ಎರಡು ಮಹತ್ವದ ಬದಲಾವಣೆ ಮಾಡಿಕೊಂಡಿದೆ.
ವೇಗಿ ಮೊಹಮ್ಮದ್ ಶಮಿ ಮತ್ತು ಯಜುವೇಂದ್ರ ಚಾಹಲ್ ಗೆ ವಿಶ್ರಾಂತಿ ನೀಡಲಾಗಿದ್ದು, ಆ ಸ್ಥಾನಕ್ಕೆ ರವೀಂದ್ರ ಜಡೇಜಾ ಮತ್ತು ಕುಲದೀಪ್ ಯಾದವ್ ಗೆ ಸ್ಥಾನ ನೀಡಲಾಗಿದೆ. ಉಳಿದಂತೆ ಕಳೆದ ಪಂದ್ಯದಲ್ಲಿ ಆಡಿದ ಆಟಗಾರರೇ ಮುಂದುವರಿದಿದ್ದಾರೆ.