ಬೆಂಗಳೂರು: ಸ್ಟಾರ್ ಕ್ರಿಕೆಟಿಗ ವಿರಾಟ್ ಕೊಹ್ಲಿ ಒಡೆತನದ ಒನ್8 ಕಮ್ಯೂಟ್ ರೆಸ್ಟೋರೆಂಟ್ ನಲ್ಲಿ ವ್ಯಕ್ತಿಯೊಬ್ಬರು ಬುಟ್ಟಾ ಎನ್ನುವ ಜೋಳದ ಆಹಾರ ವಸ್ತುವೊಂದನ್ನು ಆರ್ಡರ್ ಮಾಡಿದಾಗ ಅವರಿಗೆ ಸಿಕ್ಕ ಬಿಲ್ ನೋಡಿ ಹೌಹಾರಿ ಹೋಗಿದ್ದಾರೆ.
ಹೈದರಾಬಾದ್ ಮೂಲದ ಸ್ನೇಹ ಎಂಬವರು ಈ ವಿಚಾರವನ್ನು ತಮ್ಮ ಟ್ವಿಟರ್ ನಲ್ಲಿ ಫೋಟೋ ಸಮೇತ ಹಂಚಿಕೊಂಡಿದ್ದಾರೆ. ಬೆಂಗಳೂರಿನ ಕೊಹ್ಲಿ ಒಡೆತನದ ರೆಸ್ಟೋರೆಂಟ್ ಗೆ ತೆರಳಿದ್ದ ಅವರು ಬುಟ್ಟಾ ಎನ್ನುವ ತಿಂಡಿಯನ್ನು ಆರ್ಡರ್ ಮಾಡಿದ್ದರಂತೆ.
ಇದರಲ್ಲಿರುವ ವಿವರಣೆಗೆ ಮಾರು ಹೋಗಿ ಅವರು ಆ ಡಿಶ್ ಬೇಕು ಎಂದು ಆರ್ಡರ್ ಮಾಡಿದ್ದರಂತೆ. ಅದರಂತೆ ಅವರ ಟೇಬಲ್ ಗೆ ಸಾಸ್, ಹಸಿರು ಈರುಳ್ಳಿಯಲ್ಲಿ ಡಿಪ್ ಮಾಡಿರುವ ನಾಲ್ಕು ಕಾರ್ನ್ ಪೀಸ್ ಬಂದಿದೆ.
ಇದಕ್ಕೆ ಬಿಲ್ 525 ರೂ. ಮಾಡಲಾಗಿದೆ. ಇದನ್ನು ನೋಡಿ ಅವರು ಹೌಹಾರಿ ಹೋಗಿದ್ದಾರೆ. ನಾಲ್ಕು ಕಾರ್ನ್ ಪೀಸ್ ಗೆ ಇಷ್ಟೊಂದು ಬಿಲ್ಲಾ ಎಂದು ಅವರು ಸೋಷಿಯಲ್ ಮೀಡಿಯಾದಲ್ಲಿ ಫೋಟೋ ಹಂಚಿಕೊಂಡಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ನೆಟ್ಟಿಗರು ನಕ್ಕಿದ್ದರೆ ಮತ್ತೆ ಕೆಲವರು ಮೊದಲೇ ಬಿಲ್ ನೋಡಿಲ್ವಾ? ಈಗ ಯಾಕೆ ಡ್ರಾಮಾ ಮಾಡ್ತೀರಿ ಎಂದು ಕಾಮೆಂಟ್ ಮಾಡಿದ್ದಾರೆ.