ಮುಂಬೈ: ಫಾರ್ಮ್ ಕಳೆದುಕೊಂಡು ನಾಯಕತ್ವಕ್ಕೆ ಕುತ್ತು ಬಂದ ಬೆನ್ನಲ್ಲೇ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ರಣಜಿ ತಂಡ ಸೇರಿಕೊಂಡಿದ್ದಾರೆ. ಮುಂಬೈ ತಂಡದ ಅಭ್ಯಾಸದಲ್ಲಿ ಪಾಲ್ಗೊಂಡಿದ್ದಾರೆ.
ಇತ್ತೀಚೆಗೆ ನಡೆದಿದ್ದ ಬಾರ್ಡರ್ ಗವಾಸ್ಕರ್ ಟೆಸ್ಟ್ ಸರಣಿಯಲ್ಲಿ ರೋಹಿತ್ ಶರ್ಮಾ ಮೂರು ಪಂದ್ಯಗಳಲ್ಲಿ 5 ಇನಿಂಗ್ಸ್ ಆಡಿ ಗಳಿಸಿದ್ದು ಕೇವಲ 31 ರನ್. ಅವರು ಎರಡಂಕಿ ದಾಟಿದ್ದೇ ಅಪರೂಪ. ಜೊತೆಗೆ ನಾಯಕತ್ವವೂ ಕಳೆಗುಂದಿತ್ತು.
ಈ ಹಿನ್ನಲೆಯಲ್ಲಿ ರೋಹಿತ್ ಶರ್ಮಾರನ್ನು ತಂಡದಿಂದ ಕಿತ್ತು ಹಾಕಲು ಸಾಕಷ್ಟು ಒತ್ತಡವಿತ್ತು. ಇದರ ಬೆನ್ನಲ್ಲೇ ರೋಹಿತ್ ಶರ್ಮಾ ಜೊತೆ ಬಿಸಿಸಿಐ ಸಭೆ ನಡೆಸಿದೆ. ಈ ವೇಳೆ ಅವರ ಬ್ಯಾಟಿಂಗ್ ಕೂಡಾ ಚರ್ಚೆಯಾಗಿದೆ ಎನ್ನಲಾಗಿದೆ.
ಇದೆಲ್ಲಾ ಬೆಳವಣಿಗೆ ನಡೆವೆ ರೋಹಿತ್ ಮುಂಬೈ ತಂಡದ ರಣಜಿ ಅಭ್ಯಾಸದಲ್ಲಿ ಪಾಲ್ಗೊಂಡಿದ್ದಾರೆ. ಮುಂಬೈ ರಣಜಿ ತಂಡದೊಂದಿಗೆ ಅಭ್ಯಾಸ ನಡೆಸಲು ರೋಹಿತ್ ಅನುಮತಿ ಪಡೆದು ಬಂದಿದ್ದಾರೆ. ಹೀಗಾಗಿ ಇಂದಿನಿಂದಲೇ ರೋಹಿತ್ ಅಭ್ಯಾಸ ಆರಂಭಿಸಲಿದ್ದಾರೆ.
ಜನವರಿ 23 ರಿಂದ ಎರಡನೇ ಹಂತದ ರಣಜಿ ಪಂದ್ಯ ಆರಂಭವಾಗಲಿದೆ. ಈ ಪಂದ್ಯದಲ್ಲಿ ರೋಹಿತ್ ಪಾಲ್ಗೊಳ್ಳಲಿದ್ದಾರೆಯೇ ಎಂಬ ಅನುಮಾನ ಮೂಡಿದೆ. ಹೇಗಾದರೂ ಮಾಡಿ ಮತ್ತೆ ಫಾರ್ಮ್ ಗೆ ಮರಳಲೇ ಬೇಕೆಂದು ಪಣ ತೊಟ್ಟಿರುವ ರೋಹಿತ್ ರಣಜಿ ಆಡಿದರೂ ಅಚ್ಚರಿಯಿಲ್ಲ.