Publish Date: Thu, 09 Sep 2021 (09:40 IST)
Updated Date: Thu, 09 Sep 2021 (09:51 IST)
ಮುಂಬೈ: ಟಿ20 ವಿಶ್ವಕಪ್ ಗೆ ಆಯ್ಕೆ ಮಾಡಲಾಗಿರುವ ಟೀಂ ಇಂಡಿಯಾದಲ್ಲಿ ರವಿಚಂದ್ರನ್ ಅಶ್ವಿನ್ ಗೆ ಅಚ್ಚರಿಯ ಕರೆ ಸಿಕ್ಕರೆ, ಚಾಹಲ್ ಗೆ ಶಾಕ್ ಸಿಕ್ಕಿದೆ.
ಚಾಹಲ್ ರನ್ನು ಅವಗಣಿಸಿರುವುದಕ್ಕೆ ಆಯ್ಕೆ ಸಮಿತಿ ಅಧ‍್ಯಕ್ಷ ಚೇತನ್ ಶರ್ಮಾ ಕಾರಣ ನೀಡಿದ್ದಾರೆ. ನಮಗೆ ವೇಗವಾಗಿ ಬೌಲ್ ಮಾಡುವ ಸ್ಪಿನ್ನರ್ ಬೇಕಾಗಿತ್ತು. ಹೀಗಾಗಿ ಚಾಹಲ್ ಬದಲಿಗೆ ರಾಹುಲ್ ಚಹರ್ ಆಯ್ಕೆಯಾದರು ಎಂದಿದ್ದಾರೆ.
ಆದರೆ ಹಲವು ವರ್ಷಗಳಿಂದ ಸೀಮಿತ ಓವರ್ ಗಳ ಕ್ರಿಕೆಟ್ ನಲ್ಲಿ ಅವಗಣೆನೆಗೊಳಗಾಗಿದ್ದ ಅಶ್ವಿನ್ ಗೆ ಆಯ್ಕೆ ಸಮಿತಿ ಅಚ್ಚರಿಯ ಕರೆ ಸಿಕ್ಕಿದೆ. ಬಹುಶಃ ವಿಶ್ವಕಪ್ ನಂತಹ ಪ್ರಮುಖ ಟೂರ್ನಿಯಾಡುವಾಗ ಅನುಭವಿ ಆಟಗಾರ ಬೇಕು ಎನ್ನುವ ಕಾರಣಕ್ಕೆ ಅಶ್ವಿನ್ ಗೆ ಸ್ಥಾನ ಸಿಕ್ಕಿರಬಹುದು. ಆದರೆ ಚಾಹಲ್ ಇತ್ತೀಚೆಗಿನ ದಿನಗಳಲ್ಲಿ ಉತ್ತಮ ಬೌಲಿಂಗ್ ಪ್ರದರ್ಶನ ನೀಡದೇ ಇರುವುದು ಇಬ್ಬರು ಆಟಗಾರರಿಗೆ ಲಾಭವಾಗಿದೆ.