Select Your Language

Notifications

webdunia
webdunia
webdunia
webdunia

ಭಾರತ ತಂಡಕ್ಕೆ ಹೊಸ ಮೆಂಟರ್ ಆಗಿ ಎಂ.ಎಸ್. ಧೋನಿ ಆಯ್ಕೆ!

ಭಾರತ ತಂಡಕ್ಕೆ ಹೊಸ ಮೆಂಟರ್ ಆಗಿ ಎಂ.ಎಸ್. ಧೋನಿ ಆಯ್ಕೆ!
ಮುಂಬೈ , ಗುರುವಾರ, 9 ಸೆಪ್ಟಂಬರ್ 2021 (08:17 IST)
ಮುಂಬೈ (ಸೆ 09) ; ಭಾರತ ಪ್ರಸ್ತುತ ಇಂಗ್ಲೆಂಡ್ ಎದುರು ಟೆಸ್ಟ್ ಸರಣಿಯಲ್ಲಿ ಮುನ್ನಡೆ ಸಾಧಿಸಿದೆ. ಆದರೆ, ಅಕ್ಟೋಬರ್ನಲ್ಲಿ ನಡೆಯಲಿರುವ ಟಿ-20 ವಿಶ್ವಕಪ್ ಟೂರ್ನಿ ಗೆಲುವು ನಿಜಕ್ಕೂ ಭಾರತದ ಅತ್ಯಂತ ದೊಡ್ಡ ಗುರಿಯಾಗಿದೆ.

ದಶಕಗಳ ನಂತರ ಮತ್ತೆ ಟಿ20 ವಿಶ್ವಕಪ್ಗೆ ಮುತ್ತಿಕ್ಕಲು ಭಾರತ ತಂಡ ವಿರಾಟ್ ಕೊಹ್ಲಿ ನೇತೃತ್ವದಲ್ಲಿ ಕಾತುರದಿಂದ ಕಾಯುತ್ತಿದೆ. ಆದರೆ, ಈ ಟೂರ್ನಿಗೆ ಭಾರತ ತಂಡದ ಮೆಂಟರ್ ಯಾರು? ಎಂಬ ಪ್ರಶ್ನೆ ಕಳೆದ ಒಂದು ವರ್ಷದಿಂದ ಭಾರೀ ಸದ್ದು ಮಾಡುತ್ತಿತ್ತು. ಆದರೆ, ಆ ಮಹತ್ವದ ಪ್ರಶ್ನೆಗೆ ಇಂದು ಕೊನೆಗೂ ಉತ್ತರ ಸಿಕ್ಕಿದೆ. ಸದ್ಯಕ್ಕೆ ಅಂತಾರಾಷ್ಟ್ರೀಯ ಕ್ರಿಕೆಟ್ನಿಂದ ನಿವೃತ್ತಿ ಪಡೆದು ಐಪಿಎಲ್ನಲ್ಲಿ ಸಕ್ರೀಯವಾಗಿರುವ ಯಶಸ್ವಿ ನಾಯಕ ಎಂ.ಎಸ್. ಧೋನಿಯನ್ನು ಮುಂದಿನ ಟಿ-20 ವಿಶ್ವಕಪ್ಗೆ ಭಾರತ ಕ್ರಿಕೆಟ್ ತಂಡದ ಮೆಂಟರ್ ಆಗಿ ಬಿಸಿಸಿಐ ಇಂದು ಘೋಷಿಸಿದೆ. ಈ ದಿಢೀರ್ ಬೆಳವಣಿಗೆ ಒಮ್ಮೆಲೆ ಅಚ್ಚರಿಗೂ ಕುತೂಹಲಕ್ಕೂ ಕಾರಣವಾಗಿದೆ.
ಎಂ.ಎಸ್. ಧೋನಿ ಭಾರತದ ಯಶಸ್ವಿ ನಾಯಕರಲ್ಲಿ ಒಬ್ಬರೆನಿಸಿಕೊಂಡಿದ್ದಾರೆ. 2007 ರಲ್ಲಿ ಮೊದಲ ಬಾರಿಗೆ ದಕ್ಷಿಣ ಆಫ್ರಿಕಾದಲ್ಲಿ ನಡೆದ ಟಿ20 ವಿಶ್ವಕಪ್ನಲ್ಲಿ ಭಾರತ ತಂಡದ ಸಾರಥ್ಯ ವಹಿಸಿದ್ದ ಧೋನಿ ನಂತರ ಹಿಂತಿರುಗಿ ನೋಡಿದ್ದೆ ಇಲ್ಲ. ಮೊದಲ ಟೂರ್ನಿಯಲ್ಲೇ ಭಾರತಕ್ಕೆ ವಿಶ್ವಕಪ್ ಜಯಿಸಿಕೊಟ್ಟಿದ್ದರು. ಅಲ್ಲದೆ ಅದೇ ವರ್ಷ ಏಕದಿನ ತಂಡಕ್ಕೂ ನಾಯಕರಾಗಿ ಬಡ್ತಿ ಹೊಂದಿದ್ದರು.
2008ರಲ್ಲಿ ಟೆಸ್ಟ್ಗೂ ನಾಯಕರಾಗುವ ಮೂಲಕ ಭಾರತದ ಎಲ್ಲಾ ಮಾದರಿಯ ಕ್ರಿಕೆಟ್ಗೂ ನಾಯಕರಾಗಿದ್ದರು. ಅಲ್ಲದೆ, 2011ರಲ್ಲಿ ಏಕದಿನ ವಿಶ್ವಕಪ್ ಗೆಲ್ಲುವ ಮೂಲಕ 28 ವರ್ಷಗಳ ನಂತರ ಭಾರತಕ್ಕೆ ಏಕದಿನ ವಿಶ್ವಕಪ್ ತಂದುಕೊಟ್ಟ ಶ್ರೇಯಕ್ಕೂ ಪಾತ್ರರಾಗಿದ್ದರು. ಅದೇ ವರ್ಷ ಚಾಂಪಿಯನ್ ಟ್ರೋಫಿಯನ್ನೂ ಗೆಲ್ಲುವ ಮೂಲಕ ಮೂರೂ ಮಾದರಿಯಲ್ಲಿ ಟ್ರೋಫಿ ಗೆದ್ದ ಏಕೈಕ ನಾಯಕ ಎಂಬ ಹೊಸ ಇತಿಹಾಸವನ್ನು ಎಂ.ಎಸ್. ಧೋನಿ ಬರೆದಿದ್ದರು.
ಇದಲ್ಲದೆ, 2015ರ ವಿಶ್ವಕಪ್ನಲ್ಲಿ ಧೋನಿ ನೃತೃತ್ವದ ಭಾರತ ತಂಡ ಮತ್ತೊಮ್ಮೆ ಸೆಮಿಫೈನಲ್ ತಲುಪಿತ್ತಾದರೂ ಎಡವಿತ್ತು. ಅದೇ ವರ್ಷ ನಾಯಕತ್ವಕ್ಕೆ ಧೋನಿ ಗುಡ್ ಬೈ ಹೇಳಿದ್ದರು. ವಿರಾಟ್ ಕೊಹ್ಲಿ ನೇತೃತ್ವದಲ್ಲಿ ಕೊಹ್ಲಿ ಕೊನೆಯ ಬಾರಿಗೆ 2019ರ ಏಕದಿನ ವಿಶ್ವಕಪ್ನಲ್ಲಿ ನ್ಯೂಜಿಲೆಂಡ್ ವಿರುದ್ದ ಸೆಮಿ ಫೈನಲ್ ಪಂದ್ಯದಲ್ಲಿ ಕಣಕ್ಕಿಳಿದಿದ್ದರು. ಅಲ್ಲದೆ, ಅರ್ಧ ಶತಕವನ್ನೂ ಬಾರಿಸಿದ್ದರು. ಆದರೆ, ದುರಾದೃಷ್ಟವಶಾತ್ ಈ ಪಂದ್ಯದಲ್ಲಿ ಭಾರತ ಸೋಲನುಭವಿಸಿತ್ತು.
ಆ ನಂತರ ಮಹೇಂದ್ರ ಸಿಂಗ್ ಧೋನಿ ವಿದಾಯ ಪಂದ್ಯ ಆಡುವ ಮೊದಲೇ ನಿವೃತ್ತಿ ಘೋಷಿಸಿದ್ದರು. ಹೀಗಾಗಿ ಭಾರತ ಕ್ರಿಕೆಟ್ ತಂಡದ ಯಶಸ್ವಿ ನಾಯಕನಿಗೆ ಬಿಸಿಸಿಐ ಭವಿಷ್ಯದಲ್ಲಿ ಯಾವ ಜವಾಬ್ದಾರಿ ನೀಡಲಿದೆ? ಎಂಬ ಪ್ರಶ್ನೆ ಎಲ್ಲೆಡೆ ಮನೆ ಮಾಡಿತ್ತು. ಆದರೆ, ಈ ಎಲ್ಲಾ ಪ್ರಶ್ನೆಗಳಿಗೆ ತೆರೆ ಎಳೆದಿರುವ ಬಿಸಿಸಿಐ ಕೊನೆಗೂ ಧೋನಿಯನ್ನು ಟಿ20 ವಿಶ್ವಕಪ್ಗೆ ಮೆಂಟರ್ ಆಗಿ ಆಯ್ಕೆ ಮಾಡಿದೆ. ಈ ಬೆಳವಣಿಗೆ ಸಾಮಾನ್ಯವಾಗಿ ಧೋನಿ ಅಭಿಮಾನಿಗಳಲ್ಲಿ ಸಂತೋಷವನ್ನು ಉಂಟು ಮಾಡಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ಮುಂದಿನ ವರ್ಷ ಜುಲೈನಲ್ಲಿ ಇಂಗ್ಲೆಂಡ್ ನಲ್ಲಿ ಟೀಂ ಇಂಡಿಯಾ ಮತ್ತೊಂದು ಸರಣಿ