Select Your Language

Notifications

webdunia
webdunia
webdunia
webdunia

ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಇಂಗ್ಲೆಂಡ್ ನಲ್ಲೇ ಯಾಕೆ ನಡೆಯುತ್ತದೆ?

ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಇಂಗ್ಲೆಂಡ್ ನಲ್ಲೇ ಯಾಕೆ ನಡೆಯುತ್ತದೆ?
ದಿ ಓವಲ್ , ಭಾನುವಾರ, 11 ಜೂನ್ 2023 (09:10 IST)
ದಿ ಓವಲ್: ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಇದು ಎರಡನೇ ಬಾರಿಗೆ ನಡೆದಿದೆ. ಆದರೆ ಐಸಿಸಿ ಎರಡೂ ಕೂಟವನ್ನು ಇಂಗ್ಲೆಂಡ್ ನಲ್ಲಿಯೇ ಆಯೋಜಿಸಿದೆ.

ಇತರ ಐಸಿಸಿ ಟೂರ್ನಿಗಳಂತೆ ಡಬ್ಲ್ಯುಟಿಸಿ ಫೈನಲ್ ಪಂದ್ಯ ವ್ಯತ್ಯಸ್ಥ ತಾಣಗಳಲ್ಲಿ ನಡೆಯುವುದಿಲ್ಲ ಯಾಕೆ ಎಂಬ ಪ್ರಶ್ನೆ ಅಭಿಮಾನಿಗಳಲ್ಲಿದೆ. ಒಂದು ವೇಳೆ ಆ ರೀತಿ ನಡೆದಿದ್ದರೆ ಪಂದ್ಯದ ಫಲಿತಾಂಶ ಬೇರೆಯೇ ಆಗುತ್ತಿತ್ತು ಎನ್ನುವುದು ಟೀಂ ಇಂಡಿಯಾ ಅಭಿಮಾನಿಗಳ ಅಭಿಪ್ರಾಯ.

ಇಂಗ್ಲೆಂಡ್ ನಲ್ಲಿ ಟೆಸ್ಟ್ ಕ್ರಿಕೆಟ್ ಗೆ ಯೋಗ್ಯ ಪಿಚ್ ಮತ್ತು ವಾತಾವರಣವಿದೆ ಎನ್ನುವುದು ಈ ಟೂರ್ನಿಯನ್ನು ಅಲ್ಲಿಯೇ ನಡೆಸುವ ಪ್ರಮುಖ ಉದ್ದೇಶ. ಸಾಮಾನ್ಯವಾಗಿ ಡಬ್ಲ್ಯುಟಿಸಿ ಫೈನಲ್ ನಡೆಯುವುದು ಜೂನ್-ಜುಲೈ ತಿಂಗಳ ಅವಧಿಯಲ್ಲಿ. ಈ ಅವಧಿಯಲ್ಲಿ ಭಾರತ ಮುಂತಾದ ಉಪಖಂಡಗಳಲ್ಲಿ ಮಳೆಯಾಗುತ್ತದೆ. ಈ ಕಾರಣಕ್ಕೆ ಹವಾಮಾನ ದೃಷ್ಟಿಯಿಂದ ಇಂಗ್ಲೆಂಡ್ ಸೂಕ್ತ ಎನ್ನುವುದು ಐಸಿಸಿ ವಾದ. ಮುಂದಿನ ದಿನಗಳಲ್ಲಿ ಈ ಕೂಟವೂ ವ್ಯತ್ಯಸ್ಥ ತಾಣಗಳಲ್ಲಿ ನಡೆಯಬಹುದು.

Share this Story:

Follow Webdunia kannada

ಮುಂದಿನ ಸುದ್ದಿ

ರಿಷಬ್ ಪಂತ್ ಮಿಸ್ ಮಾಡಿಕೊಂಡ ಭಾರತೀಯ ಫ್ಯಾನ್ಸ್