Select Your Language

Notifications

webdunia
webdunia
webdunia
webdunia

ಡಬ್ಲ್ಯುಟಿಸಿ ಫೈನಲ್: ಟೀಂ ಇಂಡಿಯಾ ಪಾಲಿಗೆ ವಿಲನ್ ಆದ ಅಂಪಾಯರ್

ಡಬ್ಲ್ಯುಟಿಸಿ ಫೈನಲ್: ಟೀಂ ಇಂಡಿಯಾ ಪಾಲಿಗೆ ವಿಲನ್ ಆದ ಅಂಪಾಯರ್
ದಿ ಓವಲ್ , ಶನಿವಾರ, 10 ಜೂನ್ 2023 (19:54 IST)
Photo Courtesy: Twitter
ದಿ ಓವಲ್: ಡಬ್ಲ್ಯುಟಿಸಿ ಫೈನಲ್ ಪಂದ್ಯದಲ್ಲಿ ಸೋಲು ತಪ್ಪಿಸಲು ಹೆಣಗಾಡುತ್ತಿರುವ ಟೀಂ ಇಂಡಿಯಾಗೆ ಅಂಪಾಯರ್ ಕೂಡಾ ವಿಲನ್ ಆಗಿ ಕಾಡಿದ್ದಾರೆ.

444 ರನ್ ಗಳ ಗೆಲುವಿನ ಗುರಿ ಬೆನ್ನತ್ತಿರುವ ಟೀಂ ಇಂಡಿಯಾ ದ್ವಿತೀಯ ಇನಿಂಗ್ಸ್ ನಲ್ಲಿ ಉತ್ತಮ ಬ್ಯಾಟಿಂಗ್ ಮಾಡುತ್ತಿತ್ತು. ಆರಂಭಿಕರಾದ ರೋಹಿತ್-ಗಿಲ್ ಜೋಡಿ ಉತ್ತಮ ಲಯದಲ್ಲಿತ್ತು. ಆದರೆ 18 ರನ್ ಗಳಿಸಿದ್ದ ಶುಬ್ಮನ್ ಗಿಲ್ ವಿವಾದಾತ್ಮಕ ತೀರ್ಪಿಗೆ ಕ್ಯಾಚ್ ಔಟ್ ಆಗಿ ನಿರ್ಗಮಿಸಬೇಕಾಯಿತು. ಇದರೊಂದಿಗೆ ಟೀ ಬ್ರೇಕ್ ಕೂಡಾ ನೀಡಲಾಗಿದ್ದು, ಭಾರತ 1 ವಿಕೆಟ್ ನಷ್ಟಕ್ಕೆ 41 ರನ್ ಗಳಿಸಿದೆ.

ಬೊಲ್ಯಾಂಡ್ ಎಸೆತದಲ್ಲಿ ಗಿಲ್ ಬ್ಯಾಟ್ ತಗುಲಿದ ಚೆಂಡು ಗಲ್ಲಿ ಕಡೆಗೆ ಬಿತ್ತು. ಈ ವೇಳೆ ಅಲ್ಲಿ ಕ್ಷೇತ್ರ ರಕ್ಷಣೆ ಮಾಡುತ್ತಿದ್ದ ಕ್ಯಾಮರೂನ್ ಗ್ರೀನ್ ಪ್ರಯಾಸಕರ ಕ್ಯಾಚ್ ಪಡೆದರು. ಚೆಂಡು ನೆಲಕ್ಕೆ ತಗುಲಿರಬಹುದು ಎಂಬ ಸಂಶಯದಿಂದ ಫೀಲ್ಡ್ ಅಂಪಾಯರ್ ಗಳು ಥರ್ಡ್ ಅಂಪಾಯರ್ ಗೆ ಸಿಗ್ನಲ್ ನೀಡಿದರು. ಚೆಂಡು ಕೊಂಚವೇ ನೆಲಕ್ಕೆ ಸವರಿದಂತಿದ್ದರೂ ಥರ್ಡ್ ಅಂಪಾಯರ್ ಔಟ್ ತೀರ್ಪು ನೀಡಿಯೇ ಬಿಟ್ಟರು. ಇದರಿಂದ ರೋಹಿತ್-ಗಿಲ್ ತೀವ್ರ ಅಸಮಾಧಾನಗೊಂಡರು. ಅತ್ತ ಭಾರತೀಯ ಫ್ಯಾನ್ಸ್ ಕೂಡಾ ಸೋಷಿಯಲ್ ಮೀಡಿಯಾ ಮೂಲಕ ಅಂಪಾಯರ್ ವಿರುದ್ಧ ಆಕ್ರೋಶ ಹೊರಹಾಕುತ್ತಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಡಬ್ಲ್ಯುಟಿಸಿ ಫೈನಲ್: ಟೀಂ ಇಂಡಿಯಾ ಗೆಲ್ಲಲು ಬೇಕಿದೆ 444 ರನ್