ಮುಂಬೈ: ಡಬ್ಲ್ಯುಟಿಸಿ ಫೈನಲ್ ಪಂದ್ಯದಲ್ಲಿ ಭಾರತದ ಕಳಪೆ ಪ್ರದರ್ಶನದ ಹಿನ್ನಲೆಯಲ್ಲಿ ಟೀಂ ಇಂಡಿಯಾ ಮಾಜಿ ಕೋಚ್ ರವಿಶಾಸ್ತ್ರಿ ಬಿಸಿಸಿಐಗೆ ಕೆಲವು ಪ್ರಶ್ನೆಗಳನ್ನು ಮುಂದಿಟ್ಟಿದ್ದಾರೆ.
									
			
			 
 			
 
 			
			                     
							
							
			        							
								
																	ನಿಮ್ಮ ಪ್ರಾಮುಖ್ಯತೆ ಯಾವುದಕ್ಕೆ ಎಂಬುದನ್ನು ಸ್ಪಷ್ಟಪಡಿಸಬೇಕು. ಐಪಿಎಲ್ ಮುಖ್ಯವಾ ದೇಶ ಮುಖ್ಯವಾ ಎಂದು ಸ್ಪಷ್ಟವಾಗಲಿ ಎಂದು ಕಿಡಿ ಕಾರಿದ್ದಾರೆ.
									
										
								
																	ಒಂದು ವೇಳೆ ದೇಶ ಮುಖ್ಯ ಎಂದಾದರೆ ಐಪಿಎಲ್ ಫ್ರಾಂಚೈಸಿಗಳೊಂದಿಗೆ ಒಪ್ಪಂದ ಮಾಡುವಾಗ ಯಾವುದೇ ಸಂದರ್ಭದಲ್ಲೂ ಟೀಂ ಇಂಡಿಯಾಗೆ ಅವಶ್ಯಕತೆಯಿದ್ದಾಗ ಆಟಗಾರರನ್ನು ಬಿಟ್ಟುಕೊಡಲು ಅವಕಾಶವಿರಬೇಕು ಎಂಬ ಅಂಶ ಸೇರಿಸಿಕೊಳ್ಳಲಿ. ಇಲ್ಲಾ ಐಪಿಎಲ್ ಮುಖ್ಯ ಎಂದಾದರೆ ಡಬ್ಲ್ಯುಟಿಸಿ ಫೈನಲ್ ನಂತಹ ಪಂದ್ಯಗಳನ್ನು ಮರೆತುಬಿಡುವುದು ಒಳ್ಳೆಯದು ಎಂದು ಕಿಡಿ ಕಾರಿದ್ದಾರೆ.