Select Your Language

Notifications

webdunia
webdunia
webdunia
webdunia

Virat Kohli: ಇಷ್ಟು ವರ್ಷವಾದರೂ ಕೊಹ್ಲಿ ಯಾಕೆ ಆರ್ ಸಿಬಿ ಜೊತೆಗಿದ್ದಾರೆ, ಅವರೇ ಹೇಳಿದ ಸೀಕ್ರೆಟ್

Virat Kohli

Krishnaveni K

ಅಹಮ್ಮದಾಬಾದ್ , ಬುಧವಾರ, 4 ಜೂನ್ 2025 (08:34 IST)
Photo Credit: X
ಅಹಮ್ಮದಾಬಾದ್: ಐಪಿಎಲ್ 2025 ರ ಚಾಂಪಿಯನ್ ಆಗಿ ಹೊರಹೊಮ್ಮಿದ ಬಳಿಕ ಆರ್ ಸಿಬಿ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ಇಷ್ಟು ವರ್ಷಗಳಿಂದಲೂ ಇದೇ ತಂಡಕ್ಕೆ ನಿಷ್ಠರಾಗಿರುವುದಕ್ಕೆ ಕಾರಣವೇನೆಂದು ಬಹಿರಂಗಪಡಿಸಿದ್ದಾರೆ.

ಪಂಜಾಬ್ ಕಿಂಗ್ಸ್ ವಿರುದ್ಧ ನಿನ್ನೆ ನಡೆದ ಪಂದ್ಯವನ್ನು 6 ರನ್ ಗಳಿಂದ ಗೆದ್ದ ಆರ್ ಸಿಬಿ ಮೊದಲ ಬಾರಿಗೆ ಐಪಿಎಲ್ ಕಿರೀಟ ಮುಡಿಗೇರಿಸಿಕೊಂಡಿತು. 2008 ರಿಂದ ಇಲ್ಲಿಯವರೆಗೂ ಕೊಹ್ಲಿ ಆರ್ ಸಿಬಿ ತಂಡದ ಪರವಾಗಿಯೇ ಆಡಿದ್ದಾರೆ. ಅವರು ಇದುವರೆಗೆ ಬೇರೆ ತಂಡದ ಪರ ಐಪಿಎಲ್ ಆಡಿದ್ದಿಲ್ಲ. ಅವರ ನಿಷ್ಠೆಗಾದರೂ ಈ ಸಲ ಕಪ್ ನಮ್ದಾಗಬೇಕು ಎಂದು ಆಟಗಾರರು ಫ್ಯಾನ್ಸ್, ಬಯಸಿದ್ದರು.

ಅದರಂತೆ ನಿನ್ನೆ ಕಪ್ ಗೆದ್ದಾಗ ಭಾವುಕರಾದ ಕೊಹ್ಲಿ ಮಾತನಾಡುವಾಗ ತಮ್ಮ ಆರ್ ಸಿಬಿ ನಿಷ್ಠೆ ಬಗ್ಗೆಯೂ ಮಾತನಾಡಿದ್ದಾರೆ. ಇಷ್ಟು ವರ್ಷಗಳಿಂದ ತಾನ್ಯಾಕೆ ಬೇರೆ ತಂಡ ಸೇರಿಲ್ಲ ಎಂದರೆ ಅದಕ್ಕೆ ಕಾರಣ ಫ್ಯಾನ್ಸ್ ಎಂದಿದ್ದಾರೆ.

ಕಳೆದ 17 ವರ್ಷಗಳಿಂದ ಫೈನಲ್ ಗೆ ಬಂದರೂ ಕಪ್ ಗೆದ್ದಿಲ್ಲ. ಕೆಲವೊಂದು ಸೀಸನ್ ನಲ್ಲಿ ಲೀಗ್ ಹಂತದಲ್ಲಿಯೇ ಹೊರಬಿದ್ದಿದ್ದೂ ಇದೆ. ಹಾಗಿದ್ದರೂ ಆರ್ ಸಿಬಿ ಫ್ಯಾನ್ಸ್ ಮಾತ್ರ ಯಾವತ್ತೂ ತಮ್ಮ ನಿಷ್ಠೆ ಬಿಡಲಿಲ್ಲ. ನಾವು ಯಾವುದೇ ಸ್ಥಿತಿಯಲ್ಲಿದ್ದರೂ ನಮ್ಮನ್ನು ಬೆಂಬಲಿಸಿದರು. ಅವರೇ ನಮ್ಮ ದೊಡ್ಡ ಶಕ್ತಿ. ಅವರನ್ನು ನೋಡಿಯೇ ನಾನೂ ಈ ತಂಡವನ್ನು ಕೊನೆಯವರೆಗೂ ಬಿಡಲ್ಲ ಎಂದುಕೊಂಡೆ ಎಂದು ಕೊಹ್ಲಿ ಹೇಳಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

IPL 2025 Final: 18 ವರ್ಷಗಳ ಕನಸು ನನಸಾದ ಸಂಭ್ರಮದಲ್ಲಿ ಮೈದಾನದಲ್ಲೇ ವಿರಾಟ್‌ ಕೊಹ್ಲಿ ಕಣ್ಣೀರು