ಮುಂಬೈ: ಆಗಸ್ಟ್ 30 ರಿಂದ ಆರಂಭವಾಗಲಿರುವ ಏಷ್ಯಾ ಕಪ್ ಕ್ರಿಕೆಟ್ ಟೂರ್ನಿಗೆ ಟೀಂ ಇಂಡಿಯಾ ಆಯ್ಕೆ ತಡವಾಗಲು ಕಾರಣವೇನು ಗೊತ್ತಾ?
									
			
			 
 			
 
 			
			                     
							
							
			        							
								
																	ಏಷ್ಯಾ ಕಪ್ ನಲ್ಲಿ ಒಟ್ಟು 6 ತಂಡಗಳು ಭಾಗಿಯಾಗುತ್ತಿವೆ. ಈ ಪೈಕಿ ಪಾಕಿಸ್ತಾನ, ಬಾಂಗ್ಲಾದೇಶ, ನೇಪಾಳ ತಂಡಗಳು ತಮ್ಮ ತಂಡ ಪ್ರಕಟಿಸಿವೆ. ಆದರೆ ಭಾರತ, ಅತಿಥೇಯ ಶ್ರೀಲಂಕಾ, ಅಫ್ಘಾನಿಸ್ತಾನ ಇನ್ನೂ ತಂಡ ಪ್ರಕಟಿಸಿಲ್ಲ.
									
										
								
																	ಭಾರತ ತಂಡ ಆಯ್ಕೆ ತಡವಾಗಲು ಕಾರಣ ಕೆಎಲ್ ರಾಹುಲ್ ಮತ್ತು ಶ್ರೇಯಸ್ ಅಯ್ಯರ್. ಟೀಂ ಇಂಡಿಯಾ ಆಯ್ಕೆ ಸಮಿತಿ ಈ ಇಬ್ಬರು ಸ್ಟಾರ್ ಆಟಗಾರರ ಫಿಟ್ನೆಸ್ ವರದಿಗಾಗಿ ಕಾಯುತ್ತಿದೆ. ಈ ಇಬ್ಬರು ಫಿಟ್ ಆದರೆ ಇಬ್ಬರನ್ನೂ ಏಷ್ಯಾ ಕಪ್ ತಂಡಕ್ಕೆ ಆಯ್ಕೆ ಮಾಡುವ ಉದ್ದೇಶದಿಂದ ತಂಡದ ಆಯ್ಕೆ ತಡವಾಗಿದೆ.