ಫ್ಲೋರಿಡಾ: ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ಟಿ20 ಸರಣಿಯ ಕೊನೆಯ ಪಂದ್ಯದಲ್ಲಿ ಟೀಂ ಇಂಡಿಯಾ ಪರ 8 ಕ್ರಿಕೆಟಿಗರು ಬೌಲಿಂಗ್ ಮಾಡಿದ್ದಾರೆ!
ಈ ಸರಣಿಯನ್ನು ಟೀಂ ಇಂಡಿಯಾ ಯುವ ಕ್ರಿಕೆಟಿಗರ ಸಾಮರ್ಥ್ಯ ಪ್ರದರ್ಶನಕ್ಕೆ ವೇದಿಕೆಯಾಗಿ ಬಳಸಿಕೊಂಡಿತ್ತು. ಅಂತೆಯೇ ಕೊನೆಯ ಪಂದ್ಯದಲ್ಲಿ 8 ಮಂದಿಯನ್ನು ಬೌಲಿಂಗ್ ಗಿಳಿಸಲಾಗಿತ್ತು.
ರೆಗ್ಯುಲರ್ ಬೌಲರ್ ಗಳಾದ ಅರ್ಷ್ ದೀಪ್ ಸಿಂಗ್, ಮುಕೇಶ್ ಕುಮಾರ್, ಹಾರ್ದಿಕ್ ಪಾಂಡ್ಯ, ಯಜುವೇಂದ್ರ ಚಾಹಲ್, ಅಕ್ಸರ್ ಪಟೇಲ್, ಕುಲದೀಪ್ ಯಾದವ್ ಹೊರತಾಗಿ ತಿಲಕ್ ವರ್ಮ,ಯಶಸ್ವಿ ಜೈಸ್ವಾಲ್ ಕೂಡಾ ತಲಾ ಬೌಲಿಂಗ್ ನಡೆಸಿದ್ದಾರೆ. ಈ ಪೈಕಿ ತಿಲಕ್ ವರ್ಮ 2 ಓವರ್ ಬೌಲಿಂಗ್ ಮಾಡಿ 17 ರನ್ ನೀಡಿ 1 ವಿಕೆಟ್ ಕೂಡಾ ಕಬಳಿಸಿದರು. ಜೈಸ್ವಾಲ್ 1 ಓವರ್ ನಲ್ಲಿ 11 ರನ್ ನೀಡಿದರು. ಅನುಭವಿ ಸ್ಪಿನ್ನರ್ ಚಾಹಲ್ 4 ಓವರ್ ನಲ್ಲಿ 51 ರನ್ ನೀಡಿ ಅತ್ಯಂತ ದುಬಾರಿಯಾದರು.