Select Your Language

Notifications

webdunia
webdunia
webdunia
webdunia

ತನ್ನ ಕೈಯಾರೆ ಟಿ20 ಸರಣಿ ವೆಸ್ಟ್ ಇಂಡೀಸ್ ಗೆ ಒಪ್ಪಿಸಿದ ಟೀಂ ಇಂಡಿಯಾ

ತನ್ನ ಕೈಯಾರೆ ಟಿ20 ಸರಣಿ ವೆಸ್ಟ್ ಇಂಡೀಸ್ ಗೆ ಒಪ್ಪಿಸಿದ ಟೀಂ ಇಂಡಿಯಾ
ಫ್ಲೋರಿಡಾ , ಸೋಮವಾರ, 14 ಆಗಸ್ಟ್ 2023 (08:10 IST)
ಫ್ಲೋರಿಡಾ: ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ಅಂತಿಮ ಟಿ20 ಪಂದ್ಯವನ್ನು 8 ವಿಕೆಟ್ ಗಳಿಂದ ಸೋತ ಟೀಂ ಇಂಡಿಯಾ ತನ್ನ ಕೈಯಾರೆ ಸರಣಿ ಎದುರಾಳಿಗಳ ಮಡಿಲಿಗೊಪ್ಪಿಸಿದೆ.

ಟಾಸ್ ಗೆದ್ದ ಟೀಂ ಇಂಡಿಯಾ ಮೊದಲು ಬ್ಯಾಟಿಂಗ್ ಮಾಡಿದ್ದೇ ತಪ್ಪಾಯ್ತು. ಕಳೆದ ಎರಡು ಪಂದ್ಯದಲ್ಲಿ ಚೇಸಿಂಗ್ ಮಾಡಿ ಟೀಂ ಇಂಡಿಯಾ ಗೆಲುವು ಕಂಡಿತ್ತು. ಇದೇ ಪಿಚ್ ನಲ್ಲಿ ನಡೆದಿದ್ದ ಕಳೆದ ಪಂದ್ಯದಲ್ಲಿ ದ್ವಿತೀಯ ಸರದಿಯಲ್ಲಿ ಭರ್ಜರಿ ಬ್ಯಾಟಿಂಗ್ ನಡೆಸಿತ್ತು. ಇಷ್ಟೆಲ್ಲಾ ಇದ್ದೂ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡುವಂತಹ ದೊಡ್ಡ ಪ್ರಮಾದ ಎಸಗಿತು. 20 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 165 ರನ್ ಗಳಿಸಿದ ಭಾರತ ಎದುರಾಳಿಗಳಿಗೆ ಸುಲಭ ಗುರಿ ನೀಡಿತು.

ಈ ಮೊತ್ತ ಬೆನ್ನತ್ತಿದ ವಿಂಡೀಸ್ 18 ಓವರ್ ಗಳಲ್ಲಿ ಕೇವಲ 2 ವಿಕೆಟ್ ಕಳೆದುಕೊಂಡು 171 ರನ್ ಗಳಿಸುವ ಮೂಲಕ ಸರಣಿ ತನ್ನದಾಗಿಸಿಕೊಂಡಿತು. ಆರಂಭಿಕ ಬ್ರೆಂಡನ್‍ ಕಿಂಗ್ ಅಜೇಯ 85, ನಿಕಲಸ್ ಪೂರನ್ 47 ರನ್ ಗಳಿಸಿದರು. ಭಾರತದ ಪರ ಅರ್ಷ್ ದೀಪ್ ಸಿಂಗ್ ಮತ್ತು ತಿಲಕ್ ವರ್ಮ ತಲಾ 1 ವಿಕೆಟ್ ಕಬಳಿಸಿದರು.

Share this Story:

Follow Webdunia kannada

ಮುಂದಿನ ಸುದ್ದಿ

ನಿನ್ನೆಯ ಅಬ್ಬರ ಇಂದಿಲ್ಲ! ಆರಂಭದಲ್ಲೇ ಶುಬ್ನಂ ಗಿಲ್-ಜೈಸ್ವಾಲ್ ಔಟ್