Publish Date: Sun, 13 Aug 2023 (09:10 IST)
Updated Date: Sun, 13 Aug 2023 (09:20 IST)
ಫ್ಲೋರಿಡಾ: ಭಾರತ ಮತ್ತು ವೆಸ್ಟ್ ಇಂಡೀಸ್ ನಡುವೆ ಇಂದು ಐದು ಟಿ20 ಸರಣಿಯ ಅಂತಿಮ ಮತ್ತು ಫೈನಲ್ ಪಂದ್ಯ ನಡೆಯಲಿದೆ.
ನಿನ್ನೆ ನಡೆದ ನಾಲ್ಕನೇ ಟಿ20 ಪಂದ್ಯವನ್ನು 9 ವಿಕೆಟ್ ಗಳಿಂದ ಭರ್ಜರಿಯಾಗಿ ಗೆದ್ದುಕೊಂಡ ಟೀಂ ಇಂಡಿಯಾ ಸರಣಿಯಲ್ಲಿ ಸಮಬಲ ಸಾಧಿಸಿತ್ತು. ಹೀಗಾಗಿ ಇಂದಿನ ಪಂದ್ಯಕ್ಕೆ ಫೈನಲ್ ಕಳೆ ಬಂದಿದೆ. ಇಂದು ಗೆದ್ದ ತಂಡ ಪ್ರಶಸ್ತಿ ತನ್ನದಾಗಿಸಿಕೊಳ್ಳಲಿದೆ.
ನಿನ್ನೆಯ ಪ್ರದರ್ಶನ ಗಮನಿಸಿದರೆ ಭಾರತ ತಂಡ ಯಾವುದೇ ಬದಲಾವಣೆ ಮಾಡುವ ಸಾಧ‍್ಯತೆಯಿಲ್ಲ. ಕಳೆದ ಎರಡು ಪಂದ್ಯಗಳಲ್ಲಿ ಬ್ಯಾಟರ್ ಗಳು ನೀಡಿದ ಪ್ರದರ್ಶನ ಸಮಾಧಾನಕರವಾಗಿದೆ. ಆದರೆ ಬೌಲಿಂಗ್ ನಲ್ಲಿ ಕುಲದೀಪ್ ಯಾದವ್ ಬಿಟ್ಟರೆ ಉಳಿದವರು ಪರಿಣಾಮಕಾರಿ ಎನಿಸುತ್ತಿಲ್ಲ. ಹಾಗಿದ್ದರೂ ಬೌಲಿಂಗ್ ಪಡೆಯಲ್ಲೂ ಬದಲಾವಣೆ ಸಾಧ‍್ಯತೆಯಿಲ್ಲ. ಈ ಪಂದ್ಯ ಭಾರತೀಯ ಕಾಲಮಾನ ಪ್ರಕಾರ ರಾತ್ರಿ 8 ಗಂಟೆಗೆ ಆರಂಭವಾಗಲಿದೆ.