Publish Date: Mon, 09 May 2022 (09:01 IST)
Updated Date: Mon, 09 May 2022 (09:23 IST)
ಮುಂಬೈ: ಮುಂಬರುವ ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿಗೆ ಟೀಂ ಇಂಡಿಯಾಗೆ ಹೊಸ ನಾಯಕನ ಸಾರಥ್ಯ ಸಿಗುವ ಸಾಧ‍್ಯತೆಯಿದೆ.
ಐಪಿಎಲ್ ನ ಸತತ ಕ್ರಿಕೆಟ್ ನಿಂದ ಬಳಲಿರುವ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಸೇರಿದಂತೆ ಹಿರಿಯ ಆಟಗಾರರಿಗೆ ವಿಶ್ರಾಂತಿ ನೀಡುವ ಬಗ್ಗೆ ಬಿಸಿಸಿಐ ಚಿಂತನೆ ನಡೆಸಿದೆ. ಹೀಗಾಗಿ ಹಿರಿಯ ಆಟಗಾರರ ಅನುಪಸ್ಥಿತಿಯಲ್ಲಿ ತಂಡಕ್ಕೆ ಹೊಸ ನಾಯಕನ ಆಗಮನವಾಗಲಿದೆ.
ಕೆಎಲ್ ರಾಹುಲ್ ಅಥವಾ ರಿಷಬ್ ಪಂತ್ ಗೆ ಟಿ20 ಸರಣಿಗೆ ನಾಯಕನ ಪಟ್ಟ ನೀಡುವ ಸಾಧ್ಯತೆಯಿದೆ. ಭವಿಷ್ಯದ ದೃಷ್ಟಿಯಿಂದ ಈ ಇಬ್ಬರು ಆಟಗಾರರಿಗೆ ನಾಯಕತ್ವದ ಹೊಣೆ ನೀಡುವ ಸಾಧ್ಯತೆಯಿದೆ.