Publish Date: Thu, 16 Nov 2023 (09:20 IST)
Updated Date: Thu, 16 Nov 2023 (09:34 IST)
ಮುಂಬೈ: ಗಾಯಗೊಂಡಿರುವ ಹಾರ್ದಿಕ್ ಪಾಂಡ್ಯ ಮುಂಬರುವ ಆಸ್ಟ್ರೇಲಿಯಾ ವಿರುದ್ಧದ ಟಿ20 ಸರಣಿಯಿಂದಲೂ ಹೊರಗುಳಿಯಲಿದ್ದಾರೆ ಎಂದು ಈಗಾಗಲೇ ತಿಳಿದುಬಂದಿದೆ.
ಈ ಸರಣಿಗೆ ಖಾಯಂ ನಾಯಕ ರೋಹಿತ್ ಶರ್ಮಾ ಮತ್ತು ಪ್ರಮುಖ ಕ್ರಿಕೆಟಿಗರಿಗೆ ವಿಶ್ರಾಂತಿ ನೀಡಲಾಗುತ್ತಿದೆ. ಹೀಗಾಗಿ ಹಾರ್ದಿಕ್ ತಂಡದ ನಾಯಕತ್ವ ವಹಿಸಬಹುದು ಎಂದು ಹೇಳಲಾಗುತ್ತಿತ್ತು.
ಆದರೆ ಹಾರ್ದಿಕ್ ಕೂಡಾ ಹೊರಗುಳಿಯುವುದರಿಂದ ತಂಡದ ನಾಯಕ ಜವಾಬ್ಧಾರಿ ಹೊರಲಾದರೂ ಕೆಎಲ್ ರಾಹುಲ್ ಆಡುವ ಸಾಧ್ಯತೆಯಿದೆ. ಒಂದು ವೇಳೆ ರಾಹುಲ್ ಕೂಡಾ ವಿಶ್ರಾಂತಿ ಬಯಸಿದರೆ ಸೂರ್ಯಕುಮಾರ್ ಯಾದವ್ ನಾಯಕರಾಗುವ ಸಾಧ್ಯತೆಯಿದೆ.