Webdunia - Bharat's app for daily news and videos

Install App

WPL ಕಿರೀಟಕ್ಕೆ ಯಾರಾಗುತ್ತಾರೆ ಅಧಿಪತಿ: ಮುಂಬೈ ಇಂಡಿಯನ್ಸ್‌- ಡೆಲ್ಲಿ ಕ್ಯಾಪಿಟಲ್ಸ್‌ ಕಾದಾಟ ಇಂದು

Sampriya
ಶನಿವಾರ, 15 ಮಾರ್ಚ್ 2025 (14:33 IST)
Photo Courtesy X
ಮುಂಬೈ: ಮಹಿಳಾ ಪ್ರೀಮಿಯರ್‌ ಲೀಗ್‌ನ ಮೂರನೇ ಆವೃತ್ತಿಯ ಫೈನಲ್‌ ಇಂದು ನಡೆಯಲಿದೆ. ಮುಂಬೈನಲ್ಲಿ ನಡೆಯುವ ಈ ಹೈವೋಲ್ಟೇಜ್‌ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ ಮತ್ತು ಮುಂಬೈ ಇಂಡಿಯನ್ಸ್‌ ತಂಡಗಳು ಮುಖಾಮುಖಿಯಾಗಲಿವೆ.

ಮೊದಲ ಆವೃತ್ತಿಯಲ್ಲಿ ಚಾಂಪಿಯನ್‌ ಆಗಿದ್ದ ಹರ್ಮನ್‌ಪ್ರೀತ್‌ ಕೌರ್‌ ಬಳಗವು ಮತ್ತೊಬ್ಬೆ ಪ್ರಶಸ್ತಿಗೆ ಮುತ್ತಿಕ್ಕುವ ಕನಸು ಕಾಣುತ್ತಿದೆ. ಸತತ ಮೂರನೇ ಬಾರಿ ಫೈನಲ್‌ ಪ್ರವೇಶಿಸಿರುವ ಮೆಗ್‌ ಲ್ಯಾನಿಂಗ್‌ ನಾಯಕತ್ವದ ತಂಡವು ಚೊಚ್ಚಲ ಪ್ರಶಸ್ತಿಯನ್ನು ಎದುರು ನೋಡಿತ್ತಿದೆ.

ಕ್ಯಾಪಿಟಲ್ಸ್ ತಂಡ ಲೀಗ್‌ನಲ್ಲಿ ಆಡಿದ 8 ಪಂದ್ಯಗಳಲ್ಲಿ 5 ಗೆಲುವು ದಾಖಲಿಸಿ 10 ಅಂಕಗಳೊಂದಿಗೆ ಅಂಕ ಪಟ್ಟಿಯಲ್ಲಿ ಮೊದಲ ಸ್ಥಾನದೊಂದಿಗೆ ನೇರವಾಗಿ ಫೈನಲ್‌ಗೆ ಪ್ರವೇಶಿಸಿತ್ತು. ಮುಂಬೈ ಸಹ ಇಷ್ಟೇ ಅಂಕ ಕಲೆ ಹಾಕಿದ್ರೂ ಸಹ ರನ್‌ ರೇಟ್‌ ವಿಚಾರದಲ್ಲಿ ಹಿಂದೆ ಇದ್ದಿದ್ದರಿಂದ ಎಲಿಮಿನೇಟರ್‌ನಲ್ಲಿ ಗುಜರಾತ್‌ ಜೈಂಟ್ಸ್ ತಂಡವನ್ನು ಎದುರಿಸಿತು. ಎಲಿಮಿನೇಟರ್‌ ಪಂದ್ಯದಲ್ಲಿ 47 ರನ್‌ಗಳಿಂದ ಜೈಂಟ್ಸ್‌ ತಂಡವನ್ನು ಮಣಿಸಿದ ಮುಂಬೈ ಫೈನಲ್‌ಗೆ ಪ್ರವೇಶ ಪಡೆದಿದೆ.
 

ಡೆಲ್ಲಿ ತಂಡವು ಮೊದಲ ಆವೃತ್ತಿಯಲ್ಲಿ ಏಳು ವಿಕೆಟ್‌ಗಳಿಂದ ಮುಂಬೈ ವಿರುದ್ಧ ಸೋತು ನಿರಾಸೆ ಅನುಭವಿಸಿತ್ತು. ಎರಡನೇ ಆವೃತ್ತಿಯಲ್ಲಿ 8 ವಿಕೆಟ್‌ಗಳಿಂದ ಆರ್‌ಸಿಬಿ ವಿರುದ್ಧ ಮುಗ್ಗರಿಸಿತ್ತು. ಇದೀಗ ಮೂರನೇ ಪ್ರಯತ್ನದಲ್ಲಿ ಚರಿತ್ರೆ ನಿರ್ಮಿಸುವ ತವಕದಲ್ಲಿದೆ.<>

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ರೋಹಿತ್ ಶರ್ಮಾ ಇದ್ದ ರೂಂಗೆ ಗರ್ಲ್ ಫ್ರೆಂಡ್ ಕರೆದಿದ್ದ ಶಿಖರ್ ಧವನ್

ಜಸ್ಪ್ರೀತ್ ಬುಮ್ರಾ ಎರಡನೇ ಟೆಸ್ಟ್ ಆಡಲ್ಲ: ಅವರ ಸ್ಥಾನಕ್ಕೆ ಇವರೇ ಬೆಸ್ಟ್ ಅಂತಿದ್ದಾರೆ ಫ್ಯಾನ್ಸ್

ಆರೋಗ್ಯ ಸಂಬಂಧ ಬಿಗ್‌ ಅಪ್ಡೇಡ್ ನೀಡಿದ ಸೂರ್ಯಕುಮಾರ್ ಯಾದವ್‌

ಟೀಂ ಇಂಡಿಯಾಗೆ ಮುಂದಿನ ಟೆಸ್ಟ್ ಪಂದ್ಯ ಎಲ್ಲಿ, ಯಾವಾಗ ಇಲ್ಲಿದೆ ಡೀಟೈಲ್ಸ್

ನಾಚಿಕೆಯಿಲ್ಲದ ನಡವಳಿಕೆ: ಕ್ಯಾಚ್ ಬಿಟ್ಟು ಡ್ಯಾನ್ಸ್ ಮಾಡಿದ ಜೈಸ್ವಾಲ್‌ , ಕ್ರಿಕೆಟ್‌ ಪ್ರೇಮಿಗಳು ಆಕ್ರೋಶ

ಮುಂದಿನ ಸುದ್ದಿ
Show comments