Select Your Language

Notifications

webdunia
webdunia
webdunia
webdunia

ಸ್ಮೃತಿ ಮಂಧಾನ ಬಾಯ್ ಫ್ರೆಂಡ್ ಜೊತೆಗಿನ ಫೋಟೋ ನೋಡಿ ಅಭಿಮಾನಿಗಳ ಹಾರ್ಟ್ ಬ್ರೇಕ್

Smriti Mandhana-Palash Mucchal

Krishnaveni K

ಮುಂಬೈ , ಶುಕ್ರವಾರ, 22 ಮಾರ್ಚ್ 2024 (09:28 IST)
Photo Courtesy: Twitter
ಮುಂಬೈ: ರಾಯಲ್ ಚಾಲೆಂಜರ್ಸ್ ಬೆಂಗಳೂರು ಮಹಿಳಾ ತಂಡದ ನಾಯಕಿ ಸ್ಮೃತಿ ಮಂಧಾನ ಚೆಲುವಿಗೆ ಮಾರು ಹೋಗದವರಿಲ್ಲ. ಆಕೆಯನ್ನು ನೋಡಲೆಂದೇ ಎಷ್ಟೋ ಅಭಿಮಾನಿಗಳು ಡಬ್ಲ್ಯುಪಿಎಲ್ ಟೂರ್ನಿ ವೇಳೆ ಮೈದಾನಕ್ಕೆ ಬರುತ್ತಿದ್ದರು.

ಆದರೆ ಮೊನ್ನೆ ಡಬ್ಲ್ಯುಪಿಎಲ್ ಟೂರ್ನಿ ಫೈನಲ್ ಗೆದ್ದ ಬಳಿಕ ಸ್ಮೃತಿ ಮೈದಾನದಲ್ಲೇ ಓರ್ವ ಸುಂದರ ಯುವಕನನ್ನು ತಬ್ಬಿ ಖುಷಿ ಹಂಚಿಕೊಂಡಿದ್ದಲ್ಲದೆ, ಬಳಿಕ ಟ್ರೋಫಿ ಜೊತೆಗೆ ಪೋಸ್ ಕೊಟ್ಟಿದ್ದರು. ಅವರ ಫೋಟೋಗಳು ವೈರಲ್ ಆಗಿದ್ದವು. ಆತ ಯಾರಿರಬಹುದು ಎಂಬ ಪ್ರಶ್ನೆಗಳಿಗೆ ಈಗ ಉತ್ತರ ಸಿಕ್ಕಿದೆ.

ಈತ ಪಾಲಾಶ್ ಮುಚ್ಚಲ್. ವೃತ್ತಿಯಿಂದ ಪಾಲಾಶ್ ಗಾಯಕ, ಸಂಗೀತ ನಿರ್ದೇಶಕ ಮತ್ತು ನಿರ್ದೇಶಕ. ಪಾಲಾಶ್ ಮತ್ತು ಸ್ಮೃತಿ ಕಳೆದ ಒಂದು ವರ್ಷಕ್ಕಿಂತಲೂ ಹೆಚ್ಚು ಸಮಯದಿಂದ ಡೇಟಿಂಗ್ ನಲ್ಲಿದ್ದಾರೆ ಎನ್ನಲಾಗಿದೆ. ಇವರಿಬ್ಬರೂ ಆತ್ಮೀಯವಾಗಿರುವ ಕ್ಷಣಗಳನ್ನು ಪಾಲಾಶ್ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಅನೇಕ ಬಾರಿ ಪ್ರಕಟಿಸಿದ್ದರು. ಅಲ್ಲಿಗೆ ಕ್ವೀನ್ ಎಂದೇ ಕರೆಯಿಸಿಕೊಳ್ಳುವ ಭಾರತ ಮಹಿಳಾ ತಂಡದ ಸುಂದರ ಆಟಗಾರ್ತಿ ಎಂಗೇಜ್ ಆಗಿದ್ದಾರೆ ಎನ್ನುವುದು ಸ್ಪಷ್ಟ.

ಆದರೆ ಇದನ್ನು ನೋಡಿ ಆರ್ ಸಿಬಿ ಅಭಿಮಾನಿಗಳ ಹೃದಯ ಬ್ರೇಕ್ ಆಗಿದೆ. ಪ್ರೀತಿಯ ಪಾರಿವಾಳ ಹಾರಿ ಹೋಯ್ತು ಗೆಳೆಯ ಎಂದು ಆರ್ ಸಿಬಿ ಫ್ಯಾನ್ಸ್ ಗೋಳು ಹಂಚಿಕೊಂಡಿದ್ದಾರೆ. ಆದರೆ ಸ್ಮೃತಿ ಮತ್ತು ಪಾಲಾಶ್ ಇದುವರೆಗೆ ಅಧಿಕೃತವಾಗಿ ತಮ್ಮ ಸಂಬಂಧವನ್ನು ಎಲ್ಲೂ ಹೇಳಿಕೊಂಡಿಲ್ಲ.

Share this Story:

Follow Webdunia kannada

ಮುಂದಿನ ಸುದ್ದಿ

ಐಪಿಎಲ್ 2024: ಆರ್ ಸಿಬಿ ವಿರುದ್ಧ ಆರಂಭಿಕ ಪಂದ್ಯವಾಡಿ ದಾಖಲೆ ಮಾಡಲಿರುವ ಸಿಎಸ್ ಕೆ