Daily Horoscope

ರೋಹಿತ್ ಶರ್ಮಾ ಬದಲಿಯಾಗಿ ಏಕದಿನ ತಂಡಕ್ಕೆ ನಾಯಕರಾಗಬಲ್ಲ ಮೂವರು ಕ್ರಿಕೆಟಿಗರು

Webdunia
ಭಾನುವಾರ, 26 ನವೆಂಬರ್ 2023 (07:00 IST)
ಮುಂಬೈ: ಟೀಂ ಇಂಡಿಯಾ ಏಕದಿನ ತಂಡದಿಂದಲೂ ರೋಹಿತ್ ಶರ್ಮಾ ದೂರ ಸರಿಯುವ ಮಾತುಗಳು ಈಗ ದಟ್ಟವಾಗಿ ಕೇಳಬರುತ್ತಿದೆ. ಈ ಹಿನ್ನಲೆಯಲ್ಲಿ ಅವರ ಹೊರತಾಗಿ ಟೀಂ ಇಂಡಿಯಾಗೆ ಯಾರು ನಾಯಕರಾಗಬಹುದು ನೋಡೋಣ.

ರೋಹಿತ್ ಶರ್ಮಾ ಈಗಾಗಲೇ ಟಿ20 ತಂಡದಿಂದ ದೂರವುಳಿದಿದ್ದಾರೆ. ಇದೀಗ ಏಕದಿನ ತಂಡದಿಂದಲೂ ಹೊರಗುಳಿದು ಹೊಸ ಆಟಗಾರರು ಬೆಳೆಯಲು ಅವಕಾಶ ಮಾಡಿಕೊಡಲಿದ್ದಾರೆ. ಸದ್ಯದಲ್ಲೇ ಆಯ್ಕೆಸಮಿತಿಯೂ ಅವರ ಜೊತೆ ಈ ಬಗ್ಗೆ ಚರ್ಚೆ ನಡೆಸಲಿದೆ. ಈ ನಡುವೆ ರೋಹಿತ್ ಬದಲಿಗೆ ಏಕದಿನ ಪಂದ್ಯಗಳಲ್ಲಿ ಟೀಂ ಇಂಡಿಯಾದ ನಾಯಕತ್ವ ವಹಿಸಲು ಮೂವರು ಕ್ರಿಕೆಟಿಗರು ರೇಸ್ ನಲ್ಲಿದ್ದಾರೆ.

ಕೆಎಲ್ ರಾಹುಲ್: ಇತ್ತೀಚೆಗೆ ನಡೆದ ವಿಶ್ವಕಪ್ ನಲ್ಲಿ ವಿಕೆಟ್ ಕೀಪಿಂಗ್, ಬ್ಯಾಟಿಂಗ್ ಜೊತೆಗೆ ನಾಯಕ ರೋಹಿತ್ ಗೆ ಫೀಲ್ಡಿಂಗ್ ಸೆಟ್ ಮಾಡುವಾಗ ಮತ್ತು ಡಿಆರ್ ಎಸ್ ತೆಗೆದುಕೊಳ್ಳುವಲ್ಲಿ ರಾಹುಲ್ ತೋರುತ್ತಿದ್ದ ಕರಾರುವಾಕ್ ನಿರ್ಧಾರ ನೋಡಿದರೆ ಏಕದಿನ ಪಂದ್ಯಗಳಿಗೆ ಅವರೇ ಮುಂದಿನ ನಾಯಕನಾಗುವ ಎಲ್ಲಾ ಸಾಧ‍್ಯತೆಗಳಿವೆ.

ಹಾರ್ದಿಕ್ ಪಾಂಡ್ಯ: ರೋಹಿತ್ ಶರ್ಮಾ ಟೆಸ್ಟ್ ತಂಡದ ನಾಯಕರಾಗಿ ಮುಂದುವರಿದರೆ ಹಾರ್ದಿಕ್ ಪಾಂಡ್ಯರನ್ನು ಟಿ20 ಮತ್ತು ಏಕದಿನ ತಂಡಗಳಿಗೆ ಖಾಯಂ ನಾಯಕರಾಗಿ ಮಾಡುವ ಸಾಧ‍್ಯತೆಯಿದೆ. ಆದರೆ ಸದ್ಯಕ್ಕೆ ಹಾರ್ದಿಕ್ ಗಾಯಗೊಂಡಿದ್ದಾರೆ. ಮುಂದಿನ ವರ್ಷವಷ್ಟೇ ಅವರು ಕ್ರಿಕೆಟ್ ಕಣಕ್ಕೆ ಮರಳುವ ಸಾಧ್ಯತೆಯಿದೆ.

ಜಸ್ಪ್ರೀತ್ ಬುಮ್ರಾ: ಟೀಂ ಇಂಡಿಯಾದ ಪ್ರಮುಖ ವೇಗಿಗೆ ಈಗಾಗಲೇ ಟೆಸ್ಟ್ ತಂಡದ ನಾಯಕತ್ವ ವಹಿಸಿದ ಅನುಭವವಿದೆ. ಟಿ20 ಸರಣಿಯಲ್ಲೂ ನಾಯಕರಾಗಿ ಸರಣಿ ಜಯ ಗಳಿಸಿದ್ದಾರೆ. ತಂಡದ ಪ್ರಮುಖ ವೇಗಿಯಾಗಿರುವ ಬುಮ್ರಾಗೆ ಫಿಟ್ನೆಸ್ ಒಂದೇ ಸಮಸ್ಯೆ. ಫಿಟ್ ಆಗಿದ್ದರೆ ಅವರೂ ನಾಯಕತ್ವದ ರೇಸ್ ನಲ್ಲಿರಲಿದ್ದಾರೆ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಏಷ್ಯನ್ ಗೇಮ್ಸ್ 2026 ಆರಂಭ ಯಾವಾಗ, ಲೈವ್ ಎಲ್ಲಿ ವೀಕ್ಷಿಸಬೇಕು ಇಲ್ಲಿದೆ ಸಂಪೂರ್ಣ ವಿವರ

ಪಾಕಿಸ್ತಾನದ ಯುವ ಕ್ರಿಕೆಟಿಗನಿಗೆ ಜಸ್ಪ್ರೀತ್ ಬುಮ್ರಾಗೆ ಆರು ಸಿಕ್ಸರ್ ಚಚ್ಚೋದೇ ಗುರಿಯಂತೆ ನೋಡ್ರಪ್ಪಾ..

ಮುಖ್ಯ ಆಯ್ಕೆಗಾರ ಅಜಿತ್ ಅಗರ್ಕರ್ ಗೆ ಶಾಕ್ ಕೊಡಲು ಮುಂದಾದ ಬಿಸಿಸಿಐ

Asian Games 2026: ಏಷ್ಯನ್ ಗೇಮ್ಸ್‌ನಲ್ಲಿ ಭಾರತ vs ಜಪಾನ್ ಮಹಿಳಾ ಕ್ರಿಕೆಟ್ ಪಂದ್ಯ; ಸಮಯ, ತಂಡ ಹಾಗೂ ಲೈವ್ ಸ್ಟ್ರೀಮಿಂಗ್ ವಿವರ

IND vs AFG: ಅಫ್ಘಾನಿಸ್ತಾನ ವಿರುದ್ಧ ಇಂದು ಸಂಜು ಸ್ಯಾಮ್ಸನಾ, ವೈಭವ್ ಸೂರ್ಯವಂಶಿನಾ

ಮುಂದಿನ ಸುದ್ದಿ
Show comments