ಮುಂಬೈ: ಟೀಂ ಇಂಡಿಯಾ ಕ್ರಿಕೆಟಿಗ ವಿರಾಟ್ ಕೊಹ್ಲಿ ಡಯಟ್, ಫಿಟ್ನೆಸ್ ವಿಚಾರದಲ್ಲಿ ಕಟ್ಟು ನಿಟ್ಟು. ಇತ್ತೀಚೆಗಂತೂ ಅವರು ಫಿಟ್ನೆಸ್ ಗಾಗಿ ಸಂಪೂರ್ಣ ಸಸ್ಯಾಹಾರಿಯಾಗಿದ್ದಾರೆ.
ವಿರಾಟ್ ಕೊಹ್ಲಿಗೆ ಫೇವರಿಟ್ ಫುಡ್ ಎಂದರೆ ಚೋಲೇ ಬಟೋರೆ ಎಂದು ಎಲ್ಲರಿಗೂ ಗೊತ್ತು. ಅದರ ಹೊರತಾಗಿ ಅವರ ಫೇವರಿಟ್ ಆಹಾರವೇನು ಗೊತ್ತಾ?
ಕೊಹ್ಲಿಗೆ ಅಮ್ಮನ ಕೈ ಅಡುಗೆ ಎಂದರೆ ಅಚ್ಚುಮೆಚ್ಚು. ಅಮ್ಮ ಮಾಡುವ ಮಟನ್ ಬಿರಿಯಾನಿ, ರಾಜ್ಮಾ ರೈಸ್, ಬಟರ್ ಚಿಕನ್ ಎಂದರೆ ಭಾರೀ ಪ್ರಿಯವಾಗಿತ್ತು. ಆದರೆ ಈಗ ನಾನ್ ವೆಜ್ ತ್ಯಜಿಸಿದ್ದಾರೆ. ಹಾಗಿದ್ದರೂ ಈಗಲೂ ದೆಹಲಿಗೆ ಹೋದರೆ ಚೋಲೆ ಬಟೋರೆ ಮಾತ್ರ ಮಿಸ್ ಮಾಡಲ್ವಂತೆ. ದೇಶೀಯ ಆಹಾರಗಳ ಪೈಕಿ ಪಂಜಾಬಿ ಶೈಲಿಯ ಅಡುಗೆಗಳೆಂದರೆ ಇಷ್ಟ. ವಿದೇಶೀ ಅಡುಗೆಗಳಲ್ಲಿ ಜಪಾನೀಸ್ ಅಡುಗೆಗಳೆಂದರೆ ಕೊಹ್ಲಿಗೆ ಪ್ರಿಯ.