Select Your Language

Notifications

webdunia
webdunia
webdunia
webdunia

ಫ್ಯಾನ್ಸ್ ಗೆ ನವೀನ್ ಉಲ್ ಹಕ್-ಕೊಹ್ಲಿ ನಡುವಿನ ಕಾಳಗ ನೋಡುವ ಚಾನ್ಸ್ ಮಿಸ್!

ಫ್ಯಾನ್ಸ್ ಗೆ ನವೀನ್ ಉಲ್ ಹಕ್-ಕೊಹ್ಲಿ ನಡುವಿನ ಕಾಳಗ ನೋಡುವ ಚಾನ್ಸ್ ಮಿಸ್!
ಮುಂಬೈ , ಸೋಮವಾರ, 22 ಮೇ 2023 (08:20 IST)
Photo Courtesy: Twitter
ಮುಂಬೈ: ಟೀಂ ಇಂಡಿಯಾ ಕ್ರಿಕೆಟಿಗ ವಿರಾಟ್ ಕೊಹ್ಲಿ ಮತ್ತು ಅಫ‍್ಘಾನಿಸ್ತಾನ ಮೂಲದ ನವೀನ್ ಉಲ್ ಹಕ್ ತಮ್ಮ ರಾಷ್ಟ್ರೀಯ ತಂಡ ಪ್ರತಿನಿಧಿಸುವಾಗ ಎದಿರುಬದಿರಾದರೆ ಹೇಗಿರುತ್ತದೆ? ಹೀಗೊಂದು ಕದನ ನೋಡುವ ಕುತೂಹಲ ಅಭಿಮಾನಿಗಳಲ್ಲಿದೆ.

ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ಮುಗಿದ ಬಳಿಕ ಎರಡೂ ತಂಡಗಳ ನಡುವೆ ಸರಣಿ ನಡೆಯಲಿದೆ. ಆದರೆ ಈ ಸರಣಿಯಲ್ಲಿ ಕೊಹ್ಲಿಗೆ ವಿಶ್ರಾಂತಿ ನೀಡುವ ಸಾಧ‍್ಯತೆಯಿದೆ. ಹೀಗಾಗಿ ಅಭಿಮಾನಿಗಳಿಗೆ ಕೊಹ್ಲಿ-ನವೀನ್ ನಡುವಿನ ಕಾಳಗ ನೋಡುವ ಅವಕಾಶ ಮಿಸ್ ಆಗಬಹುದು.

ಇಬ್ಬರೂ ಐಪಿಎಲ್ ಪಂದ್ಯದ ವೇಳೆ ಕಿತ್ತಾಡಿಕೊಂಡಿದ್ದು ಭಾರೀ ಸುದ್ದಿಯಾಗಿತ್ತು. ಬಳಿಕ ಈಗಲೂ ನವೀನ್ ತಮ್ಮ ಲಕ್ನೋ ಸೂಪರ್ ಜೈಂಟ್ಸ್ ಪರ ಯಾವುದೇ ಮೈದಾನದಲ್ಲಿ ಆಡುವಾಗಲೂ ಫ್ಯಾನ್ಸ್ ಕೊಹ್ಲಿ ಕೊಹ್ಲಿ ಎಂದು ಕಿಚಾಯಿಸುತ್ತಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಐಪಿಎಲ್ 2023: ಕಿಂಗ್ ಕೊಹ್ಲಿ ಶತಕಕ್ಕೆ ಪ್ರಿನ್ಸ್ ಗಿಲ್ ಠಕ್ಕರ್