Publish Date: Mon, 22 May 2023 (08:40 IST)
Updated Date: Mon, 22 May 2023 (09:17 IST)
ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತೊಮ್ಮೆ ನಿರಾಶಾದಾಯಕವಾಗಿ ಐಪಿಎಲ್ ಟೂರ್ನಿ ಮುಗಿಸಿದೆ. ಈ ಬಾರಿಯೂ ಪ್ಲೇ ಆಫ್ ಹಂತಕ್ಕೇರಲು ವಿಫಲವಾಗುವುದರೊಂದಿಗೆ ಕಪ್ ಗೆಲ್ಲುವ ಅವಕಾಶ ಕಳೆದುಕೊಂಡಿತು.
ಗುಜರಾತ್ ನ ಶುಬ್ಮನ್ ಗಿಲ್ ಸಿಕ್ಸರ್ ಸಿಡಿಸಿ ಶತಕದ ಜೊತೆ ಆರ್ ಸಿಬಿ ಗೆಲುವನ್ನೂ ಕಸಿದುಕೊಳ್ಳುವುದರೊಂದಿಗೆ ವಿರಾಟ್ ಕೊಹ್ಲಿ ತೀವ್ರ ನಿರಾಸೆ ಅನುಭವಿಸಿದರು. ಸೋತ ನಿರಾಸೆಯಲ್ಲಿ ನೇರವಾಗಿ ಡಗ್ ಔಟ್ ಗೆ ತೆರಳಿದ ಕೊಹ್ಲಿ ಕಣ್ಣೀರು ಹಾಕಿದರು.
ಕೊಹ್ಲಿ 14 ವರ್ಷಗಳಿಂದ ಆರ್ ಸಿಬಿ ತಂಡದಲ್ಲಿದೆ. ಆದರೆ ಸ್ಟಾರ್ ಆಟಗಾರನಿಗೆ ಒಮ್ಮೆಯೂ ಕಪ್ ಗೆಲ್ಲುವ ಅವಕಾಶ ಸಿಗಲಿಲ್ಲ. ಕೊಹ್ಲಿಯೇ ಹಲವು ಬಾರಿ ಇದು ತಮ್ಮ ಕನಸು ಎಂದಿದ್ದಾರೆ. ಆದರೆ ಆ ಕನಸು ಈ ಬಾರಿಯೂ ನನಸಾಗಲಿಲ್ಲ ಎಂದು ಕಿಂಗ್ ತೀವ್ರ ನಿರಾಸೆಗೊಳಗಾದರು.