Select Your Language

Notifications

webdunia
webdunia
webdunia
webdunia

ಕೊಹ್ಲಿ, ಆರ್ ಸಿಬಿಯನ್ನು ತಮಾಷೆ ಮಾಡಿದ ನವೀನ್ ಉಲ್ ಹಕ್

ಕೊಹ್ಲಿ, ಆರ್ ಸಿಬಿಯನ್ನು ತಮಾಷೆ ಮಾಡಿದ ನವೀನ್ ಉಲ್ ಹಕ್
ಬೆಂಗಳೂರು , ಸೋಮವಾರ, 22 ಮೇ 2023 (09:00 IST)
ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಲಕ್ನೋ ಸೂಪರ್ ಜೈಂಟ್ಸ್ ಆಟಗಾರರ ನಡುವಿನ ಘರ್ಷಣೆ ಇನ್ನೂ ಮುಂದುವರಿದಿದೆ. ಅದರಲ್ಲೂ ಕೊಹ್ಲಿ-ನವೀನ್ ಉಲ್ ಹಕ್ ವಾರ್ ಮುಂದುವರಿದಿದೆ.

ನವೀನ್ ಉಲ್ ಹಕ್ ಈ ಮೊದಲು ಕೊಹ್ಲಿ ಜೊತೆಗೆ ಮೈದಾನದಲ್ಲಿ ನಡೆದ ಘರ್ಷಣೆಯನ್ನೇ ಇನ್ನೂ ಮುಂದುವರಿಸುತ್ತಿದ್ದಾರೆ. ಕೊಹ್ಲಿ ಜೊತೆ ಮೈದಾನದಲ್ಲಿ ಈ ಹಿಂದೆ ಮಾತಿನ ಚಕಮಕಿ ನಡೆಸಿದ್ದಕ್ಕೆ ನವೀನ್ ಎಲ್ಲೇ ಹೋದರೂ ಪ್ರೇಕ್ಷಕರು ಕೊಹ್ಲಿ ಹೆಸರೆತ್ತಿ ಕಿಚಾಯಿಸುತ್ತಿದ್ದರು.

ಇದೀಗ ಆರ್ ಸಿಬಿ ಗುಜರಾತ್ ವಿರುದ್ಧ ಸೋತ ಬೆನ್ನಲ್ಲೇ ನವೀನ್ ಉಲ್ ಹಕ್ ಸೋಷಿಯಲ್ ಮೀಡಿಯಾದಲ್ಲಿ ಕೊಹ್ಲಿ ಮತ್ತು ಆರ್ ಸಿಬಿಯನ್ನು ತಮಾಷೆ ಮಾಡಿದ್ದಾರೆ. ಒಬ್ಬ ವ್ಯಕ್ತಿ ಜೋರಾಗಿ ನಗುತ್ತಿರುವ ಫೋಟೋವನ್ನು ಅಪ್ ಲೋಡ್ ಮಾಡಿರುವ ನವೀನ್ ಆರ್ ಸಿಬಿ ಮತ್ತು ಕಿಂಗ್ ಕೊಹ್ಲಿಗೆ ಟಾಂಗ್ ಕೊಟ್ಟಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಆರ್ ಸಿಬಿಗೆ ಸೋಲು: ವಿರಾಟ್ ಕೊಹ್ಲಿ ಕಣ್ಣಲ್ಲಿ ನೀರು