Webdunia - Bharat's app for daily news and videos

Install App

ಮಯಾಂಕ್ ಅಗರ್ವಾಲ್ ಸೇವಿಸಿದ ನೀರಿನ ಬಾಟಲಿಯಲ್ಲಿತ್ತಾ ವಿಷ

Krishnaveni K
ಬುಧವಾರ, 31 ಜನವರಿ 2024 (08:20 IST)
ಅಗರ್ತಲಾ: ಕರ್ನಾಟಕ ಕ್ರಿಕೆಟ್ ತಂಡದ ನಾಯಕ ಮಯಾಂಕ್ ಅಗರ್ವಾಲ್ ವಿಮಾನ ಪ್ರಯಾಣ ವೇಳೆ ಅಸ್ವಸ್ಥರಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

ರಣಜಿ ಟ್ರೋಫಿ ಆಡಲು ತಂಡದ ಜೊತೆ ಸೂರತ್ ನಲ್ಲಿ ವಿಮಾನವೇರಿದಾಗ ಬಾಯಾರಿಕೆಗಾಗಿ ನೀರು ಸೇವಿಸಿದ್ದರು. ಆದರೆ ನೀರು ಸೇವಿಸಿದ ತಕ್ಷಣ ಗಂಟಲಲ್ಲಿ ಉರಿ ಕಂಡುಬಂದಿದ್ದು, ವಾಂತಿಯಾಗಿತ್ತು. ಮಾತನಾಡಲೂ ಆಗದ ಪರಿಸ್ಥಿತಿಗೆ ಮಯಾಂಕ್ ತಲುಪಿದ್ದರು. ತಕ್ಷಣವೇ ಅವರನ್ನು ಅಗರ್ತಲಾದ ಐಎಲ್ ಜೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. ತೀವ್ರ ನಿಗಾ ಘಟಕದಲ್ಲಿರಿಸಿ ಚಿಕಿತ್ಸೆ ಕೊಡಿಸಲಾಯಿತು. ಇದೀಗ ಅವರು ಪ್ರಾಣಾಪಾಯದಿಂದ ಹೊರಬಂದಿದ್ದಾರೆ ಎಂದು ತಿಳಿದುಬಂದಿದೆ.

ತಕ್ಷಣವೇ ಚಿಕಿತ್ಸೆ ದೊರೆತ ಕಾರಣ ಮಯಾಂಕ್ ಜೀವಕ್ಕೆ ಕುತ್ತಾಗಲಿಲ್ಲ. ತಕ್ಷಣವೇ ಕರ್ನಾಟಕ ಕ್ರಿಕೆಟ್ ಅಸೋಸಿಯೇಷನ್ ಅಧಿಕಾರಿಗಳನ್ನೂ ಅಗರ್ತಲಾಗೆ ಕಳುಹಿಸಿ ಮಯಾಂಕ್ ಗೆ ಬೇಕಾದ ವ್ಯವಸ್ಥೆ ಮಾಡಿಕೊಡಲಾಗಿದೆ.

ಬಾಟಲಿ ನೀರಿನಲ್ಲಿ ವಿಷ ಶಂಕೆ
ಮಯಾಂಕ್ ನೀರು ಕುಡಿದ ತಕ್ಷಣ ಅಸ್ವಸ್ಥರಾಗಿದ್ದರಿಂದ ಇದೀಗ ಆ ಬಾಟಲಿ ನೀರಿನ ಪರೀಕ್ಷೆ ಮಾಡಲಾಗುತ್ತಿದೆ. ಆದರೆ ಅವರು ಅಸ್ವಸ್ಥಗೊಂಡ ರೀತಿ ನೋಡಿದರೆ ಆ ನೀರಿನ ಬಾಟಲಿಗೆ ವಿಷ ಅಥವಾ ಆಸಿಡ್ ಮಿಕ್ಸ್ ಆಗಿರಬಹುದು ಎಂದು ಶಂಕೆ ವ್ಯಕ್ತವಾಗಿದೆ. ಇದೀಗ ವೈದ್ಯರೂ ಮಯಾಂಕ್ ಗೆ ವಿವಿಧ ಪರೀಕ್ಷೆ ನಡೆಸಿದ್ದು, ಅವರ ಅನಾರೋಗ್ಯಕ್ಕೆ ಕಾರಣವೇನೆಂದು ಪತ್ತೆ ಮಾಡುತ್ತಿದ್ದಾರೆ.

ಇತ್ತೀಚೆಗಷ್ಟೇ ತ್ರಿಪುರಾ ವಿರುದ್ಧ ನಡೆದಿದ್ದ ರಣಜಿ ಟ್ರೋಫಿ ಪಂದ್ಯದಲ್ಲಿ ಮಯಾಂಕ್ ಕರ್ನಾಟಕದ ಗೆಲುವಿನ ರೂವಾರಿಯಾಗಿದ್ದರು. ಈ ರಣಜಿ ಟ್ರೋಫಿಯಲ್ಲಿ ಅವರು ಅತ್ಯುತ್ತಮ ಫಾರ್ಮ್ ನಲ್ಲಿದ್ದರು. ಶುಕ್ರವಾರ ರೈಲ್ವೇಸ್ ವಿರುದ್ಧ ನಡೆಯಲಿರುವ ರಣಜಿ ಪಂದ್ಯದಲ್ಲಿ ಭಾಗಿಯಾಗಲು ಸೂರತ್ ಗೆ ಪ್ರಯಾಣ ಬೆಳೆಸಿದ್ದರು. ಅಷ್ಟರಲ್ಲಿ ಇಂತಹದ್ದೊಂದು ಘಟನೆ ನಡೆದಿದ್ದು, ಇಡೀ ತಂಡವೇ ಶಾಕ್ ನಲ್ಲಿದೆ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

IND vs ENG: ವೈಸ್ ಕ್ಯಾಪ್ಟನ್ಸಿ ಪಟ್ಟ ರಿಷಭ್ ಪಂತ್ ಗೆ ಕೆಲಸ ಮಾಡಲು ಕೆಎಲ್ ರಾಹುಲ್

IND vs ENG: ಇಷ್ಟಕ್ಕಾದ್ರೂ ಕನ್ನಡಿಗ ಕರುಣ್ ನಾಯರ್ ತಂಡದಲ್ಲಿರಬೇಕು ಎಂದ ಫ್ಯಾನ್ಸ್

ಪಂದ್ಯದ ನಡುವೆ ಕ್ರಿಕೆಟಿಗರು, ಪ್ರೇಕ್ಷಕರು ಕಿವಿಗೆ ಈ ಸಾಧನವನ್ನು ಏಕೆ ಹಾಕಿಕೊಳ್ಳುತ್ತಿದ್ದಾರೆ

IND vs ENG: ಒಂದೇ ಓವರ್ ನಲ್ಲಿ 23 ರನ್, ಹಿಗ್ಗಾಮುಗ್ಗಾ ಟ್ರೋಲ್ ಆದ ಪ್ರಸಿದ್ಧ ಕೃಷ್ಣ

ಪಕ್ಕದಲ್ಲೇ ಇಂಥಾ ಸುಂದರಿ ಇರಲು...ಇದೇ ಕಾರಣಕ್ಕೆ ದ್ವಿತೀಯ ಟೆಸ್ಟ್ ಆಡಲ್ಲ ಅಂದ್ರಂತೆ ಬುಮ್ರಾ

ಮುಂದಿನ ಸುದ್ದಿ
Show comments