ಬೆಂಗಳೂರು: ಕರ್ನಾಟಕ ಮೂಲದ ಕ್ರಿಕೆಟಿಗರಾದ ಕೆಎಲ್ ರಾಹುಲ್ ಮತ್ತು ಮಯಾಂಕ್ ಅಗರ್ವಾಲ್ ಎಷ್ಟು ಒಳ್ಳೆಯ ಗೆಳೆಯರು ಎಂದು ಎಲ್ಲರಿಗೂ ಗೊತ್ತೇ ಇದೆ.
ಸದ್ಯಕ್ಕೆ ರಾಹುಲ್ ಗಾಯಗೊಂಡು ಚೇತರಿಸಿಕೊಂಡು ಬೆಂಗಳೂರಿನ ಎನ್ ಸಿಎನಲ್ಲಿ ಪುನಶ್ಚೇತನ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಹೀಗಾಗಿ ಗೆಳೆಯ ಮಯಾಂಕ್ ಜೊತೆ ಅಮೂಲ್ಯ ಸಮಯ ಕಳೆಯುತ್ತಿದ್ದಾರೆ.
ಕುಚಿಕು ಗೆಳೆಯ ಮಯಾಂಕ್ ಜೊತೆ ರೆಸ್ಟೋರೆಂಟ್ ನಲ್ಲಿ ಒಟ್ಟಿಗೇ ಫೇವರಿಟ್ ಆಹಾರ ಚಪ್ಪರಿಸುತ್ತಿರುವ ಫೋಟೋಗಳನ್ನು ರಾಹುಲ್ ಹಂಚಿಕೊಂಡಿದ್ದಾರೆ. ಈ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.