Publish Date: Mon, 09 Apr 2018 (08:30 IST)
Updated Date: Mon, 09 Apr 2018 (08:32 IST)
ನವದೆಹಲಿ: ಮಾಜಿ ನಾಯಕ ಸೌರವ್ ಗಂಗೂಲಿ ಲಾರ್ಡ್ಸ್ ಕ್ರಿಕೆಟ್ ಮೈದಾನದಲ್ಲಿ ಹಿಂದೊಮ್ಮೆ ಅಂಗಿ ಬಿಚ್ಚಿ ಸಂಭ್ರಮಿಸಿದ್ದು ಇಂದಿಗೂ ಪ್ರೇಕ್ಷಕರು ಮರೆತಿಲ್ಲ. ಇದೇ ರೀತಿ ಕೊಹ್ಲಿ ಸಂಭ್ರಮಿಸಬಹುದಾದ ಕ್ಷಣ ಯಾವುದು ಗೊತ್ತೇ?
ಇದಕ್ಕೆ ಸ್ವತಃ ಸೌರವ್ ಗಂಗೂಲಿ ಉತ್ತರಿಸಿದ್ದಾರೆ. ಒಂದು ವೇಳೆ ವಿರಾಟ್ ಕೊಹ್ಲಿ ಅಂಗಿ ಬಿಚ್ಚಿ ಕುಣಿದಾಡುವಂತಹ ಸಂದರ್ಭ ಎಂದು ಬಂದರೆ ಅದು ಯಾವುದು ಇರಬಹುದು? ಕೊಹ್ಲಿಯ ಎದುರಲ್ಲೇ ಗಂಗೂಲಿ ಇಂತಹದ್ದೊಂದು ಪ್ರಸಂಗದ ಊಹೆ ಮಾಡಿದ್ದಾರೆ.
‘ನನ್ನ ಹಾಗೆ ಕೊಹ್ಲಿ ಶರ್ಟ್ ಬಿಚ್ಚಿ ಸಂಭ್ರಮಿಸುವುದಿದ್ದರೆ ಅದು 2019 ವಿಶ್ವಕಪ್ ಗೆದ್ದ ಬಳಿಕ ಆಗಿರಬಹುದು. ಅಂದು ಇಂಗ್ಲೆಂಡ್ ನ ಆಕ್ಸ್ ಫರ್ಡ್ ಬೀದಿಯಲ್ಲಿ ಟ್ರೋಫಿ ಸಮೇತ ಕೊಹ್ಲಿ ಶರ್ಟ್ ಬಿಚ್ಚಿ ಸಂಭ್ರಮಿಸುತ್ತಾ ಓಡಬಹುದು, ಅವರ ಹಿಂದೆ ಹಾರ್ದಿಕ್ ಪಾಂಡ್ಯ ಕೂಡಾ ಇರಬಹುದು’ ಎಂದು ಗಂಗೂಲಿ ತಮಾಷೆಯಾಗಿ ಆ ಸನ್ನಿವೇಶವನ್ನು ವಿವರಿಸಿದ್ದಾರೆ. ಪಕ್ಕದಲ್ಲೇ ಇದ್ದ ಕೊಹ್ಲಿ ನಗುತ್ತಾ ಗಂಗೂಲಿ ಮಾತಿಗೆ ಸಹಮತಿ ಸೂಚಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.