Publish Date: Sun, 02 Oct 2022 (09:10 IST)
Updated Date: Sun, 02 Oct 2022 (09:26 IST)
ಮುಂಬೈ: ವಿಶ್ವದ ಶ್ರೀಮಂತ ಕ್ರೀಡಾಪಟುಗಳಲ್ಲೊಬ್ಬರಾದ ವಿರಾಟ್ ಕೊಹ್ಲಿ ಇನ್ ಸ್ಟಾಗ್ರಾಂನಲ್ಲೂ ಗರಿಷ್ಠ ಫಾಲೋವರ್ ಗಳನ್ನು ಹೊಂದಿದ್ದಾರೆ.
ಹೀಗಾಗಿ ಕೊಹ್ಲಿ ಮಾಡುವ ಪ್ರತೀ ಇನ್ ಸ್ಟಾಗ್ರಾಂ ಪೋಸ್ಟ್ ಕೂಡಾ ದುಬಾರಿ. ಕೊಹ್ಲಿ ಮಾಡುವ ಪ್ರತೀ ಪ್ರಾಯೋಜಕತ್ವದ ಪೋಸ್ಟ್ ಗೆ ಬರೋಬ್ಬರಿ 8.9 ಕೋಟಿ ರೂ. ಶುಲ್ಕ ಪಡೆಯುತ್ತಾರಂತೆ!
ಈ ಲಿಸ್ಟ್ ನಲ್ಲಿ ಕೊಹ್ಲಿಗೆ ಜಾಗತಿಕವಾಗಿ ನಾಲ್ಕನೇ ಸ್ಥಾನ. ಅವರಿಗಿಂತ ದುಬಾರಿ ಆಟಗಾರರೆಂದರೆ ಫುಟ್ಬಾಲ್ ದಿಗ್ಗಜರಾದ ಕ್ರಿಸ್ಟಿಯಾನೋ ರೊನಾಲ್ಡೊ, ಲಿಯೊನಲ್ ಮೆಸ್ಸಿ ಮತ್ತು ನೇಯ್ಮರ್ ಜ್ಯೂನಿಯರ್. ಕ್ರಿಕೆಟಿಗರ ಪೈಕಿ ಕೊಹ್ಲಿಯೇ ವಿಶ್ವಕ್ಕೇ ನಂ.1 ದುಬಾರಿ ಆಟಗಾರ.
-Edited by Rajesh Patil