ಗುವಾಹಟಿ: ಭಾರತ ಮತ್ತು ದ.ಆಫ್ರಿಕಾ ನಡುವೆ ಇಂದು ಗುವಾಹಟಿಯಲ್ಲಿ ಎರಡನೇ ಟಿ20 ಪಂದ್ಯ ನಡೆಯಲಿದೆ.
ಮೊದಲ ಪಂದ್ಯವನ್ನು ಟೀಂ ಇಂಡಿಯಾ ಗೆದ್ದುಕೊಂಡಿತ್ತು. ಇಂದಿನ ಪಂದ್ಯ ಗೆದ್ದರೆ ಟೀಂ ಇಂಡಿಯಾ ಸರಣಿ ಗೆದ್ದಂತಾಗುತ್ತದೆ. ಆದರೆ ದ.ಆಫ್ರಿಕಾವೂ ಸುಲಭ ಎದುರಾಳಿಯಲ್ಲ.
ಮೊದಲ ಪಂದ್ಯದಲ್ಲಿ ಬೌಲರ್ ಗೆ ಸಹಕಾರಿಯಾಗುವ ಪಿಚ್ ನಿಂದಾಗಿ ಆಫ್ರಿಕಾ ಮೊದಲು ಬ್ಯಾಟಿಂಗ್ ಮಾಡಿ ರನ್ ಗಳಿಸಲು ತಿಣುಕಾಡಿತ್ತು. ಆದರೆ ಈ ಪಂದ್ಯದಲ್ಲೂ ಹೇಗೇ ಆಗುತ್ತದೆ ಎಂದು ಹೇಳಲಾಗದು. ಹೀಗಾಗಿ ರೋಹಿತ್ ಪಡೆ ಮೈಮರೆಯುವಂತಿಲ್ಲ. ಟಿ20 ವಿಶ್ವಕಪ್ ಗೆ ಆತ್ಮವಿಶ್ವಾಸ ಗಳಿಸುವ ದೃಷ್ಟಿಯಿಂದ ಈ ಸರಣಿಯನ್ನು ಗೆಲ್ಲುವುದು ಟೀಂ ಇಂಡಿಯಾಗೆ ಮುಖ್ಯವಾಗಿದೆ. ಈ ಪಂದ್ಯ ಸಂಜೆ 7 ಗಂಟೆಗೆ ಆರಂಭವಾಗಲಿದೆ.