Publish Date: Sat, 01 Oct 2022 (20:19 IST)
Updated Date: Sat, 01 Oct 2022 (20:20 IST)
ಗುವಾಹಟಿ: ಬೆನ್ನು ನೋವಿಗೊಳಗಾಗಿರುವ ಟೀಂ ಇಂಡಿಯಾ ವೇಗಿ ಜಸ್ಪ್ರೀತ್ ಬುಮ್ರಾ ಲಭ್ಯತೆ ಬಗ್ಗೆ ಕೋಚ್ ರಾಹುಲ್ ದ್ರಾವಿಡ್ ಅಪ್ ಡೇಟ್ ಕೊಟ್ಟಿದ್ದಾರೆ.
ಬುಮ್ರಾ ಮುಂಬರುವ ಟಿ20 ವಿಶ್ವಕಪ್ ಗೂ ಅಲಭ್ಯರಾಗಬಹುದು ಎಂಬ ಮಾಹಿತಿ ಟೀಂ ಇಂಡಿಯಾ ಅಭಿಮಾನಿಗಳಿಗೆ ಆತಂಕ ಮೂಡಿಸಿದೆ. ಪ್ರಮುಖ ವೇಗಿಯಾಗಿರುವ ಬುಮ್ರಾ ಲಭ್ಯತೆ ಬಗ್ಗೆ ರಾಹುಲ್ ದ್ರಾವಿಡ್ ಈಗ ಮಾಧ‍್ಯಮಗಳಿಗೆ ಸ್ಪಷ್ಟನೆ ನೀಡಿದ್ದಾರೆ.
ಬುಮ್ರಾ ಸದ್ಯಕ್ಕೆ ಎನ್ ಸಿಎಗೆ ತೆರಳಿದ್ದಾರೆ. ವೈದ್ಯಕೀಯ ವರದಿಗಳ ಬಗ್ಗೆ ತೀರಾ ತಲೆಕೆಡಿಸಿಕೊಂಡಿಲ್ಲ. ಅಧಿಕೃತವಾಗಿ ಏನು ಸ್ಪಷ್ಟನೆ ಬರುತ್ತದೋ ಅದಕ್ಕೆ ಬದ್ಧರಾಗಿರುತ್ತೇವೆ. ಈಗಲೂ ಅವರು ಟಿ20 ವಿಶ್ವಕಪ್ ತಂಡದಿಂದ ಅಧಿಕೃತವಾಗಿ ಹೊರಬಿದ್ದಿಲ್ಲ ಎಂದಿದ್ದಾರೆ.
-Edited by Rajesh Patil