ಎಕಾನಮಿ ಕ್ಲಾಸ್ ನಲ್ಲಿ ಬೆಂಗಳೂರಿಗೆ ಬಂದ ಕಿಂಗ್ ಕೊಹ್ಲಿ: ಅಭಿಮಾನಿಗಳಿಂದ ಅದ್ಧೂರಿ ಸ್ವಾಗತ

Webdunia
ಸೋಮವಾರ, 6 ನವೆಂಬರ್ 2023 (17:12 IST)
Photo Courtesy: Twitter
ಬೆಂಗಳೂರು: ಏಕದಿನ ವಿಶ್ವಕಪ್ ನಲ್ಲಿ ಟೀಂ ಇಂಡಿಯಾ ಮುಂದಿನ ಮತ್ತು ಕೊನೆಯ ಲೀಗ್ ಪಂದ್ಯವನ್ನು ನೆದರ್ಲ್ಯಾಂಡ್ಸ್ ವಿರುದ್ಧ ಆಡಲಿದೆ.

ಈ ಪಂದ್ಯ ಬೆಂಗಳೂರಿನ ಚಿನ್ನಸ್ವಾಮಿ ಮೈದಾನದಲ್ಲಿ ನವಂಬರ್ 12 ರಂದು ನಡೆಯಲಿದೆ. ಈ ಪಂದ್ಯದಲ್ಲಿ ಭಾಗಿಯಾಗಲು ಕೊಹ್ಲಿ ಮುಂಚಿತವಾಗಿಯೇ ಬೆಂಗಳೂರಿಗೆ ಬಂದಿಳಿದಿದ್ದಾರೆ. ವಿಶೇಷವೆಂದರೆ ಸಾವಿರಾರು ಕೋಟಿಗಳ ಒಡೆಯ ಕೊಹ್ಲಿ ಸಾಮಾನ್ಯರಂತೇ ಎಕಾನಮಿ ಕ್ಲಾಸ್ ನಲ್ಲಿ ಪ್ರಯಾಣಿಸಿದ್ದು ಎಲ್ಲರ ಗಮನ ಸೆಳೆದಿದೆ.

ಕೊಹ್ಲಿ ತಂಡದಿಂದ ಪ್ರತ್ಯೇಕವಾಗಿ ಏಕಾಂಗಿಯಾಗಿ ಬೆಂಗಳೂರಿಗೆ ಬಂದಿದ್ದು, ಏರ್ಪೋರ್ಟ್ ನಲ್ಲಿ ಅಭಿಮಾನಿಗಳು ಕೊಹ್ಲಿಗೆ ಭಾರೀ ಸ್ವಾಗತ ನೀಡಿದ್ದಾರೆ. ತಂಡದ ಉಳಿದ ಸದಸ್ಯರು ತಡವಾಗಿ ಬೆಂಗಳೂರಿಗೆ ಆಗಮಿಸಲಿದ್ದಾರೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಐಪಿಎಲ್ ಆಡುವ ಕಾರಣಕ್ಕೆ ಕೊಹ್ಲಿಗೆ ಬೆಂಗಳೂರು ಎರಡನೇ ತವರಿದ್ದಂತೇ ಆಗಿದೆ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ವಿರಾಟ್‌ ಕೊಹ್ಲಿ ಅಭಿಮಾನಿಗಳಿಗೆ ಗುಡ್‌ನ್ಯೂಸ್‌: ಆಲೂರಿನಲ್ಲಿ ಕಣಕ್ಕಿಳಿಯಲಿದ್ದಾರೆ ಭಾರತದ ಸ್ಟಾರ್‌ ಬ್ಯಾಟರ್‌

ಸ್ಮೃತಿ ಮಂಧಾನ ಜೊತೆ ಮದುವೆ ಆಗುತ್ತೋ ಇಲ್ವೋ ಆತಂಕದಲ್ಲಿ ಎಲ್ಲಿ ಸೇರಿದ್ದಾರೆ ನೋಡಿ ಪಾಲಾಶ್ ಮುಚ್ಚಲ್

ಸ್ಮೃತಿ ಮಂಧಾನ ಮದುವೆ ಬಗ್ಗೆ ಕೊನೆಗೂ ಸ್ಪಷ್ಟ ನಿರ್ಧಾರ ಹೇಳಿದ ಸಹೋದರ: ಫ್ಯಾನ್ಸ್ ಶಾಕ್

ಸ್ಮೃತಿ ಮಂಧಾನ, ಪಾಲಾಶ್ ಮುಚ್ಚಲ್ ಹೊಸ ಮದುವೆ ದಿನಾಂಕ ಫಿಕ್ಸ್

ವಿವಾದಗಳ ಬೆನ್ನಲ್ಲೇ ಏರ್ ಪೋರ್ಟ್ ನಲ್ಲಿ ಆಯ್ಕೆ ಸಮಿತಿಯ ಪ್ರಗ್ಯಾನ್ ಓಝಾ ಜೊತೆ ಕೊಹ್ಲಿ ಗಂಭೀರ ಚರ್ಚೆ video

ಮುಂದಿನ ಸುದ್ದಿ
Show comments