ಸಮಯ ಪೋಲು ಮಾಡಿದ್ದಕ್ಕೆ ವಿಚಿತ್ರ ರೀತಿಯಲ್ಲಿ ಔಟ್ ಆದ ಲಂಕಾದ ಆಂಜಲೋ ಮ್ಯಾಥ್ಯೂಸ್

Webdunia
ಸೋಮವಾರ, 6 ನವೆಂಬರ್ 2023 (16:54 IST)
Photo Courtesy: Twitter
ನವದೆಹಲಿ: ಐಸಿಸಿ ಏಕದಿನ ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ಇಂದು ಬಾಂಗ್ಲಾ ಮತ್ತು ಶ್ರೀಲಂಕಾ ನಡುವಿನ ಪಂದ್ಯದಲ್ಲಿ ಲಂಕಾ ಬ್ಯಾಟಿಗ ಆಂಜಲೋ ಮ್ಯಾಥ್ಯೂಸ್ ವಿಚಿತ್ರ ರೀತಿಯಲ್ಲಿ ಔಟ್ ಆಗಿದ್ದಾರೆ.

ಆಗಷ್ಟೇ ಕ್ರೀಸ್ ಗೆ ಬಂದಿದ್ದ ಆಂಜಲೋ ಮ್ಯಾಥ್ಯೂಸ್ ಹೆಲ್ಮೆಟ್ ಸರಿ ಬರುತ್ತಿಲ್ಲವೆಂದು ಸಾಕಷ್ಟು ಸಮಯ ಹಾಳು ಮಾಡುತ್ತಿದ್ದರು. ಇದು ಬಾಂಗ್ಲಾ ನಾಯಕ ಶಕೀಬ್ ಅಸಮಾಧಾನಕ್ಕೆ ಕಾರಣವಾಯಿತು. ಹೀಗಾಗಿ ಶಕೀಬ್ ಅಂಪಾಯರ್ ಬಳಿ ಮ್ಯಾಥ್ಯೂಸ್ ಔಟ್ ಗಾಗಿ ಮನವಿ ಮಾಡಿದರು. ನಿಯಮದ ಪ್ರಕಾರ ಬ್ಯಾಟಿಗ ಉದ್ದೇಶಪೂರ್ವಕವಾಗಿ ಸಮಯ ಹಾಳು ಮಾಡುತ್ತಿದ್ದರೆ ಆತನನ್ನು ಔಟ್ ಎಂದು ಘೋಷಿಸುವ ಅವಕಾಶವಿದೆ.

ಇದೇ ನಿಯಮದಂತೆ ಮ್ಯಾಥ್ಯೂಸ್ ರನ್ನು ಟೈಮ್ಡ್ ಔಟ್ ಎಂದು ಘೋಷಿಸಲಾಯಿತು. ಈ ಬಗ್ಗೆ ಸ್ಥಳದಲ್ಲೇ ಮ್ಯಾಥ್ಯೂಸ್ ಅಂಪಾಯರ್ ಜೊತೆ ವಾಗ್ವಾದ ನಡೆಸಿದರೂ ಪ್ರಯೋಜನವಾಗಲಿಲ್ಲ. ಈ ಟೈಮ್ಡ್ ಔಟ್ ಈಗ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆಯ ವಿಷಯವಾಗಿದೆ.

ಕೆಲವರು ನಿಧಾನಗತಿಯ ಓವರ್ ನಡೆಸಿದರೆ ಫೀಲ್ಡಿಂಗ್ ಮಾಡುವ ತಂಡಕ್ಕೆ ನಷ್ಟ. ಹೀಗಾಗಿ ಶಕೀಬ್ ಮನವಿ ಮಾಡಿದ್ದು ಸರಿ ಎಂದರೆ ಮತ್ತೆ ಕೆಲವರು ಮಾನವೀಯತೆಯ ದೃಷ್ಟಿಯಿಂದ ಮ್ಯಾಥ್ಯೂಸ್ ಗೆ ಅವಕಾಶ ಕೊಡಬೇಕಿತ್ತು ಎನ್ನುತ್ತಿದ್ದಾರೆ. ಮ್ಯಾಥ್ಯೂಸ್ ಆಗಷ್ಟೇ ಕ್ರೀಸ್ ಗೆ ಬಂದಿದ್ದರು. ಒಂದೇ ಒಂದು ಬಾಲ್ ಎದುರಿಸಿರಲಿಲ್ಲ. ಈ ರೀತಿ ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ ಟೈಮ್ಡ್ ಔಟ್ ಆಗುತ್ತಿರುವ ಮೊದಲ ಕ್ರಿಕೆಟಿಗ ಎಂಬ ದಾಖಲೆ ಅವರದ್ದಾಗಿದೆ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

IND vs NZ: ಶತಕವನ್ನು ಸಂಭ್ರಮಿಸಲಿಲ್ಲ... ಗೆಲುವಿಗಾಗಿ ಕೊನೆಯ ಕ್ಷಣದವರೆಗೆ ಹೋರಾಡಿದ ವಿರಾಟ್ ಕೊಹ್ಲಿ

ಡಬ್ಲ್ಯುಪಿಎಲ್‌ನಲ್ಲಿ ಮಿಂಚು ಹರಿಸಿದ ಬೆನ್ನಲ್ಲೇ ಟಗರುಪುಟ್ಟಿ ಶ್ರೇಯಾಂಕಗೆ ಖುಲಾಯಿಸಿದ ಅದೃಷ್ಟ

India vs New Zealand 3rd Odi: ನಿರ್ಣಾಯಕ ಪಂದ್ಯದಲ್ಲಿ ಭಾರತಕ್ಕೆ ಶುಭಾರಂಭ

WPL 2026: ದಾಖಲೆ ತಪ್ಪಿಸಿಕೊಂಡ ಸ್ಮೃತಿ ಮಂದಾನ: ಆರ್‌ಸಿಬಿ ಗೆಲುವಿನ ನಾಗಾಲೋಟ

WPL 2026: ಡಬ್ಲ್ಯುಪಿಎಲ್‌ನಲ್ಲಿ ಕಿರಿಯ ವಯಸ್ಸಿನಲ್ಲೇ ಎರಡೆರಡು ದಾಖಲೆ ಬರೆದ ಟಗರು ಪುಟ್ಟಿ

ಮುಂದಿನ ಸುದ್ದಿ
Show comments