ಕೋಲ್ಕೊತ್ತಾ: ದ.ಆಫ್ರಿಕಾ ವಿರುದ್ಧದ ಏಕದಿನ ವಿಶ್ವಕಪ್ ಪಂದ್ಯದಲ್ಲಿ ಜನ್ಮದಿನದಂದೇ ವಿಶ್ವ ದಾಖಲೆಯ 49 ನೇ ಏಕದಿನ ಶತಕ ಸಿಡಿಸಿದ ವಿರಾಟ್ ಕೊಹ್ಲಿಗೆ ಬಂಗಾಳ ಕ್ರಿಕೆಟ್ ಅಸೋಸಿಯೇಷನ್ ಸನ್ಮಾನ ಮಾಡಿದೆ.
ಪಂದ್ಯದ ಬಳಿಕ ಬಂಗಾಳ ಕ್ರಿಕೆಟ್ ಅಸೋಸಿಯೇಷನ್ ಅಧ್ಯಕ್ಷ ಸ್ನೇಹಶಿಶ್ ಗಂಗೂಲಿ (ಸೌರವ್ ಗಂಗೂಲಿ ಸಹೋದರ) ಚಿನ್ನ ಲೇಪಿತ ಬ್ಯಾಟ್ ಒಂದನ್ನು ಉಡುಗೊರೆಯಾಗಿ ನೀಡಿ ಸನ್ಮಾನಿಸಿದ್ದಾರೆ.
ಇನ್ನು, ಪಂದ್ಯ ಮುಗಿದ ಬಳಿಕ ಬಿಸಿಸಿಐ ಕೂಡಾ ಕೊಹ್ಲಿಗೆ ವಿಶೇಷ ಕೇಕ್ ಕಟಿಂಗ್ ಮಾಡಿಸುವ ಮೂಲಕ ಅಭಿನಂದನೆ ಸಲ್ಲಿಸಿತ್ತು. ಕೊಹ್ಲಿಯ ಈ ವಿಶೇಷ ಸಾಧನೆಗೆ ಅಭಿಮಾನಿಗಳು, ಮಾಜಿ ಕ್ರಿಕೆಟಿಗರು ಅಭಿನಂದನೆಗಳ ಮಹಾಪೂರವೇ ಹರಿಸಿದ್ದರು.