Publish Date: Wed, 11 Dec 2019 (10:22 IST)
Updated Date: Wed, 11 Dec 2019 (10:24 IST)
ಮುಂಬೈ: ವೆಸ್ಟ್ ಇಂಡೀಸ್ ವಿರುದ್ಧದ ಇಂದಿನ ಪಂದ್ಯದಲ್ಲಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಆರು ರನ್ ಗಳಿಸಿದರೆ ಮತ್ತೊಂದು ದಾಖಲೆ ತಮ್ಮ ಹೆಸರಿಗೆ ಬರೆಯಿಸಿಕೊಳ್ಳಲಿದ್ದಾರೆ.
ಇನ್ನು ಆರು ರನ್ ಗಳಿಸಿದರೆ ಕೊಹ್ಲಿ ತವರಿನಲ್ಲಿ ಟಿ20 ಪಂದ್ಯಗಳಲ್ಲಿ 1000 ರನ್ ಪೂರೈಸಿದ ಭಾರತದ ಮೊದಲ ಮತ್ತು ವಿಶ್ವದ ಮೂರನೇ ಬ್ಯಾಟ್ಸ್ ಮನ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ.
ಜಾಗತಿಕವಾಗಿ ಮಾರ್ಟಿನ್ ಗುಪ್ಟಿಲ್ 1430 ರನ್ ಗಳೊಂದಿಗೆ ಅಗ್ರಸ್ಥಾನದಲ್ಲಿದ್ದರೆ ಕಾಲಿನ್ ಮುನ್ರೋ 1000 ರನ್ ಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದಾರೆ.