ಮುಂಬೈ: ಇತ್ತೀಚೆಗೆ ಬಾಲಿವುಡ್ ನಟಿ ಅವನೀತ್ ಕೌರ್ ಬೋಲ್ಡ್ ಫೋಟೋಗೆ ಲೈಕ್ ಕೊಟ್ಟು ವಿರಾಟ್ ಕೊಹ್ಲಿ ಕತೆ ಫಿನಿಶ್ ಆಗಿದ್ಯಂತೆ. ಪೂಸಿ ಹೊಡೆದರೂ ಅನುಷ್ಕಾ ಶರ್ಮಾ ಮಾತ್ರ ತಣ್ಣಗಾಗುತ್ತಿಲ್ವಂತೆ. ಹೀಗಂತ ಕೊಹ್ಲಿ ಈಗ ಟ್ರೋಲ್ ಆಗುತ್ತಿದ್ದಾರೆ.
ಅನಿರೀಕ್ಷಿತವಾಗಿ ಕೊಹ್ಲಿ ಬಾಲಿವುಡ್ ನಟಿ ಅವನೀತ್ ಕೌರ್ ಅವರ ಬೋಲ್ಡ್ ಫೋಟೋವೊಂದನ್ನು ಲೈಕ್ ಮಾಡಿದ್ದರು. ಇದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಕೊನೆಗೆ ತಾಂತ್ರಿಕ ದೋಷದಿಂದ ಹೀಗಾಯಿತು ಎಂದು ಕೊಹ್ಲಿಯೇ ಸ್ಪಷ್ಟನೆ ಕೊಡಬೇಕಾಗಿ ಬಂತು.
ಇದರ ಬೆನ್ನಲ್ಲೇ ನೆಟ್ಟಿಗರು ಮಾತ್ರ ಕೊಹ್ಲಿಯನ್ನು ಇನ್ನಿಲ್ಲದಂತೆ ಟ್ರೋಲ್ ಮಾಡುತ್ತಿದ್ದಾರೆ. ಇದೀಗ ಬೆಂಗಳೂರಿನಲ್ಲಿ ರೆಸ್ಟೋರೆಂಟ್ ಒಂದಕ್ಕೆ ಅನುಷ್ಕಾರನ್ನು ಕರೆದುಕೊಂಡು ಕೊಹ್ಲಿ ಡಿನ್ನರ್ ಡೇಟ್ ಗೆ ತೆರಳಿದ್ದಾರೆ. ಈ ವೇಳೆ ಕಾರಿನಿಂದ ಇಳಿದ ಬಳಿಕ ಅನುಷ್ಕಾ ಎಂದಿನಂತೆ ಕೊಹ್ಲಿಗೂ ಕಾಯದೇ ಹೋಟೆಲ್ ಒಳಗೆ ತೆರಳಿದ್ದಾರೆ. ಇದನ್ನೇ ಹಲವರು ಟ್ರೋಲ್ ಮಾಡಿದ್ದಾರೆ. ಅನುಷ್ಕಾಗೆ ಗಂಡನ ಮೇಲಿನ ಸಿಟ್ಟು ಇನ್ನೂ ಕಡಿಮೆಯಾಗಿಲ್ಲ ಎಂದಿದ್ದಾರೆ.
ಇನ್ನು ಕೆಲವರು ಅನುಷ್ಕಾರನ್ನು ತಣ್ಣಗಾಗಿಸುವುದಕ್ಕೇ ಕೊಹ್ಲಿ ಡಿನ್ನರ್ ಡೇಟ್ ಗೆ ಕರೆದೊಯ್ದಿದ್ದಾರೆ ಎನ್ನುತ್ತಿದ್ದಾರೆ. ಐಡಿಯಲ್ ಕಪಲ್ ಎನ್ನುವುದಕ್ಕೆ ಕೊಹ್ಲಿ-ಅನುಷ್ಕಾ ಬೆಸ್ಟ್ ಉದಾಹರಣೆ. ಆದರೆ ಈಗ ಅವನೀತ್ ಕೌರ್ ಫೋಟೋ ವಿಚಾರದಿಂದ ಗಾಸಿಪ್ ಪ್ರಿಯರು ಇನ್ನಿಲ್ಲದಂತೆ ಟ್ರೋಲ್ ಮಾಡುತ್ತಿದ್ದಾರೆ.