Select Your Language

Notifications

webdunia
webdunia
webdunia
webdunia

ರಾಹುಲ್ ದ್ರಾವಿಡ್ ಜೊತೆಗಿನ ಹಳೆಯ ನೆನಪು ಹಂಚಿಕೊಂಡ ವಿರಾಟ್ ಕೊಹ್ಲಿ

ರಾಹುಲ್ ದ್ರಾವಿಡ್ ಜೊತೆಗಿನ ಹಳೆಯ ನೆನಪು ಹಂಚಿಕೊಂಡ ವಿರಾಟ್ ಕೊಹ್ಲಿ
ವಿಂಡ್ಸರ್ ಪಾರ್ಕ್ , ಸೋಮವಾರ, 10 ಜುಲೈ 2023 (08:30 IST)
Photo Courtesy: Twitter
ವಿಂಡ್ಸರ್ ಪಾರ್ಕ್: ಟೀಂ ಇಂಡಿಯಾ ರನ್ ಮೆಷಿನ್ ವಿರಾಟ್ ಕೊಹ್ಲಿ ಕೋಚ್ ರಾಹುಲ್ ದ್ರಾವಿಡ್ ಜೊತೆಗಿನ ಹಳೆಯ ನೆನಪೊಂದನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಎಲ್ಲರಿಗೂ ತಿಳಿದಿರುವಂತೆ ಕೊಹ್ಲಿ-ದ್ರಾವಿಡ್ ಒಂದೊಮ್ಮೆ ಟೀಂ ಇಂಡಿಯಾದಲ್ಲಿ ಜೊತೆಯಾಗಿ ಆಡಿದವರು. ಈಗ ಕೊಹ್ಲಿ ಆಟಗಾರನಾಗಿ ಮುಂದುವರಿದಿದ್ದರೆ, ದ್ರಾವಿಡ್ ಕೋಚ್ ಆಗಿ ತಂಡಕ್ಕೆ ಮರಳಿದ್ದಾರೆ.

ಈ ನಡುವೆ ಕೋಚ್ ದ್ರಾವಿಡ್ ಜೊತೆಗೆ ವಿಂಡ್ಸರ್ ಪಾರ್ಕ್ ಮೈದಾನದ ಬಾಲ್ಕನಿಯಲ್ಲಿ ನಿಂತು ಫೋಟೋಗೆ ಪೋಸ್ ನೀಡಿರುವ ಕೊಹ್ಲಿ 12 ವರ್ಷದ ಹಿಂದೆ ಇದೇ ರೀತಿ ನಾವು ಇದೇ ಮೈದಾನದಲ್ಲಿ ಒಟ್ಟಿಗಿದ್ದವು. ಆದರೆ ಆಗ ಇಬ್ಬರೂ ಆಟಗಾರರಾಗಿದ್ದೆವು. ಈಗ ಬೇರೆ ಬೇರೆ ಕರ್ತವ್ಯ ನಿರ್ವಹಿಸುತ್ತಿದ್ದೇವೆ. 2011 ರಲ್ಲಿ ಭಾರತ ಇಲ್ಲಿ ಟೆಸ್ಟ್ ಪಂದ್ಯವಾಡಿದ್ದಾಗ ಸೋಲಿನ ಭೀತಿಯಲ್ಲಿತ್ತು. ಆದರೆ ಆ ಪಂದ್ಯದಲ್ಲಿ ಮುರಳಿ ವಿಜಯ್, ಹರ್ಭಜನ್, ದ್ರಾವಿಡ್ ನೆರವಿನಿಂದ ಪಂದ್ಯ ಡ್ರಾ ಆಗಿತ್ತು. ಆ ಪಂದ್ಯದಲ್ಲಿ ಕೊಹ್ಲಿ ಕೂಡಾ ಆಡಿ 30 ರನ್ ಗಳಿಸಿದ್ದರು. ಹೀಗಾಗಿ ಆ ಹಳೆಯ ನೆನಪನ್ನು ಕೊಹ್ಲಿ ಹಂಚಿಕೊಂಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ವಿಂಡ್ಸರ್ ಪಾರ್ಕ್ ಗೆ ಬಂದಿಳಿದ ಟೀಂ ಇಂಡಿಯಾ