Select Your Language

Notifications

webdunia
webdunia
webdunia
webdunia

ಸೋತ ಮೇಲೂ ಬುದ್ಧಿ ಕಲಿಯದ ವಿರಾಟ್ ಕೊಹ್ಲಿ

ಸೋತ ಮೇಲೂ ಬುದ್ಧಿ ಕಲಿಯದ ವಿರಾಟ್ ಕೊಹ್ಲಿ
ಲೀಡ್ಸ್ , ಬುಧವಾರ, 18 ಜುಲೈ 2018 (10:00 IST)
ಲೀಡ್ಸ್: ಟೀಂ ಇಂಡಿಯಾ ಇಂಗ್ಲೆಂಡ್ ವಿರುದ್ಧ ಏಕದಿನ ಸರಣಿ ಸೋತ ಮೇಲೂ ಬುದ್ಧಿ ಕಲಿಯದ ನಾಯಕ ವಿರಾಟ್ ಕೊಹ್ಲಿ ತಮ್ಮ ನಿರ್ಧಾರಗಳನ್ನು ತಾವೇ ಹೊಗಳಿಕೊಂಡಿದ್ದಾರೆ.
 

ಅಂತಿಮ ಪಂದ್ಯ ನಿರ್ಣಾಯಕವಾಗಿದ್ದರೂ ಇನ್ನಿಲ್ಲದ ಪ್ರಯೋಗ ಮಾಡಿ ಕೊಹ್ಲಿ ಕೈ ಸುಟ್ಟುಕೊಂಡರು. ಹಾಗಿದ್ದರೂ ತಮ್ಮ ಬಿಂಕ ಬಿಡದ ಕೊಹ್ಲಿ ತಾವು ಮಾಡಿದ್ದೇ ಸರಿ ಎಂದು ಸಮರ್ಥಿಸಿಕೊಂಡಿದ್ದಾರೆ.

ಕೆಎಲ್ ರಾಹುಲ್ ರನ್ನು ಕೈ ಬಿಟ್ಟು ದಿನೇಶ್ ಕಾರ್ತಿಕ್ ರನ್ನು ಆಡಿಸಿದ್ದು, ಉಮೇಶ್ ಯಾದವ್ ಬದಲು ಶ್ರಾದ್ಧೂಲ್ ಠಾಕೂರ್ ಗೆ ಸ್ಥಾನ ನೀಡಿದ್ದು ವಿಶ್ವಕಪ್ ದೃಷ್ಟಿಯಿಂದ. ಸೋತಿದ್ದಕ್ಕೇ ಇದೆಲ್ಲಾ ಟೀಕೆಗೊಳಗಾಗುತ್ತಿದೆ. ಗೆದ್ದಿದ್ದರೆ ತನ್ನ ನಿರ್ಧಾರವನ್ನು ಯಾರೂ ಪ್ರಶ್ನಿಸುತ್ತಿರಲಿಲ್ಲ ಎಂದು ಕೊಹ್ಲಿ ಹೇಳಿಕೊಂಡಿದ್ದಾರೆ.

‘ದಿನೇಶ್ ಚೆನ್ನಾಗಿ ಆಡುತ್ತಾರೆಂದು ನಾವು ಯೋಚಿಸಿದೆವು. ಬ್ಯಾಟಿಂಗ್ ಕ್ರಮಾಂಕದ ಬಗ್ಗೆ ನನಗೆ ಪಶ್ಚಾತ್ತಾಪವಿಲ್ಲ. ಶ್ರಾದ್ಧೂಲ್ ಗೂ ಸ್ವಲ್ಪ ಅನುಭವ ಸಿಗಲಿ ಎಂದು ಅವಕಾಶ ಕೊಟ್ಟೆವು. ವಿಶ್ವಕಪ್ ದೃಷ್ಟಿಯಿಂದ ಇದು ಅಗತ್ಯವಾಗಿತ್ತು’ ಎಂದು ಕೊಹ್ಲಿ ಸಮರ್ಥಿಸಿಕೊಂಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಅಭಿಮಾನಿಗಳ ದೇಶಭಕ್ತಿ ನೋಡಿ ಭಾವುಕರಾದ ವಿರಾಟ್ ಕೊಹ್ಲಿ!