Select Your Language

Notifications

webdunia
webdunia
webdunia
webdunia

ಅನುಷ್ಕಾ ಶರ್ಮಾ ಲಂಡನ್‌ ಮೋಹದಿಂದ ವಿರಾಟ್‌ ಕೊಹ್ಲಿಯ ಕ್ರಿಕೆಟ್‌ ಹಾಳಾಯಿತಾ: ನೆಟ್ಟಿಗರ ತರಾಟೆ

Star Batter Virat Kohli, Actress Anushka Sharma, India Cricket

Sampriya

ಮುಂಬೈ , ಶುಕ್ರವಾರ, 24 ಅಕ್ಟೋಬರ್ 2025 (14:29 IST)
Photo Credit X
ಮುಂಬೈ: ಭಾರತದ ಸ್ಟಾರ್‌ ಬ್ಯಾಟರ್‌ ವಿರಾಟ್ ಕೊಹ್ಲಿ ಅವರು ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯ ಸತತ ಎರಡನೇ ಪಂದ್ಯದಲ್ಲಿ ಸೊನ್ನೆ ಸುತ್ತಿದ್ದಾರೆ. ಅದರ ಬೆನ್ನಲ್ಲೇ ವಿರಾಟ್‌ ಕೊಹ್ಲಿ ಅವರ ಪತ್ನಿ ನಟಿ ಅನುಷ್ಕಾ ಶರ್ಮಾ ಟ್ರೋಲಿಗರ ಆಹಾರವಾಗಿದ್ದಾರೆ. 

ರನ್‌ ಮಿಷಿನ್‌ ಖ್ಯಾತಿಯ ಕೊಹ್ಲಿ ಅವರು ತಮ್ಮ ಶ್ರೇಷ್ಠ ವೃತ್ತಿಜೀವನದಲ್ಲಿ ಮೊದಲ ಬಾರಿಗೆ ಆಸ್ಟ್ರೇಲಿಯಾ ವಿರುದ್ಧ ಸತತ ಏಕದಿನ ಪಂದ್ಯಗಳಲ್ಲಿ ಶೂನ್ಯಕ್ಕೆ ಔಟಾಗಿದ್ದಾರೆ.  ಹೀಗಾಗಿ, ಭಾರತ ಸತತ ಎರಡೂ ಪಂದ್ಯಗಳನ್ನು ಸೋತು, ಸರಣಿಯನ್ನು ಕಳೆದುಕೊಂಡಿದೆ. 

ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯ ಮೊದಲ ಏಕದಿನ ಪಂದ್ಯದಲ್ಲಿ ಕೊಹ್ಲಿ ಎಂಟು ಎಸೆತಗಳಲ್ಲಿ ಶೂನ್ಯಕ್ಕೆ ಔಟಾಗಿದ್ದರು. ದ್ವಿತೀಯ ಪಂದ್ಯದಲ್ಲಿ ಮೂರು ಎಸೆತಗಳಲ್ಲಿ ಆಟ ಮುಗಿಸಿದರು.

ವಿರಾಟ್‌ ಕೊಹ್ಲಿ ಅವರ ಬ್ಯಾಟಿಂಗ್‌ ವೈಫಲ್ಯಕ್ಕೆ ಸಂಬಂಧಿಸಿದಂತೆ ಹಲವಾರು ಪೋಸ್ಟ್‌ಗಳು, ಅನುಷ್ಕಾ ಶರ್ಮಾ ಅವರನ್ನು ಟೀಕಿಸಲಾಗುತ್ತಿದೆ. ಕೆಲ ನೆಟ್ಟಿಗರು ಕೊಹ್ಲಿಯ ಕ್ರಿಕೆಟ್‌ ವೃತ್ತಿಜೀವನಕ್ಕೆ ಅನುಷ್ಕಾ ಸರಿಪಡಿಸಲಾಗದ ಹಾನಿ ಉಂಟುಮಾಡಿದ್ದಾರೆ ಎಂದು ಕಿಡಿಕಾರಿದ್ದಾರೆ.

ಅನುಷ್ಕಾ ಅವರ ಲಂಡನ್‌ ಮೋಹದಿಂದ ಕೊಹ್ಲಿಯ ಕ್ರಿಕೆಟ್‌ ಹಾಳಾಯಿತು ಎಂದು ದೂರಿದ್ದಾರೆ. ಕೆಲ ಕೊಹ್ಲಿ ಅಭಿಮಾನಿಗಳು ಅನುಷ್ಕಾ ಬೆಂಬಲಕ್ಕೆ ನಿಂತಿದ್ದಾರೆ. ಕೊಹ್ಲಿ ಉತ್ತಮವಾಗಿ ಆಡುತ್ತಿರುವಾಗ ಅದರ ಶ್ರೇಯವನ್ನು ಅನುಷ್ಕಾಗೆ ನೀಡಲಿಲ್ಲ. ಈಗ ಅವರು ವೈಫಲ್ಯ ಕಾಣುತ್ತಿರುವಾಗ ಮಾತ್ರ ಅನುಷ್ಕಾ ಕಾರಣ ಎನ್ನುವುದು ನಾಚಿಕೆಗೇಡು ಎಂದು ಹೇಳಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಜಾವೆಲಿನ್ ಥ್ರೋ ತಾರೆ ನೀರಜ್ ಚೋಪ್ರಾ ಅವರಿಗೆ ಭಾರತೀಯ ಸೇನೆಯಲ್ಲಿ ವಿಶೇಷ ಹುದ್ದೆ