Select Your Language

Notifications

webdunia
webdunia
webdunia
webdunia

ವಿರಾಟ್ ಕೊಹ್ಲಿ, ರೋಹಿತ್ ಶರ್ಮಾಗೆ ಒಂದು ವಿದಾಯ ಪಂದ್ಯವಾಡುವ ಹಕ್ಕೂ ಇಲ್ವೇ

Rohit Sharma-Virat Kohli

Krishnaveni K

ಮುಂಬೈ , ಮಂಗಳವಾರ, 12 ಆಗಸ್ಟ್ 2025 (09:47 IST)
ಮುಂಬೈ: ಇಷ್ಟು ದಿನ ಟೀಂ ಇಂಡಿಯಾವನ್ನು ಹೆಗಲ ಮೇಲೆ ಹೊತ್ತು ನಡೆದ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿಗೆ ಈಗ ಒಂದು ಒಳ್ಳೆಯ ವಿದಾಯ ಪಂದ್ಯವಾಡುವ ಹಕ್ಕೂ ಇಲ್ಲವೇ? ಹೀಗಂತ ಫ್ಯಾನ್ಸ್ ಕೇಳುತ್ತಿದ್ದಾರೆ.

ಟಿ20 ಮತ್ತು ಟೆಸ್ಟ್ ಮಾದರಿಯಿಂದ ರೋ-ಕೊ ಜೋಡಿ ನಿವೃತ್ತಿಯಾದಾಗ ಅನೇಕ ಅಭಿಮಾನಿಗಳು ಬೇಸರಿಸಿಕೊಂಡಿದ್ದರು. ಆದರೆ ಏಕದಿನ ಪಂದ್ಯದಲ್ಲಿ ಈ ಇಬ್ಬರು ಆಟಗಾರರು ಮುಂದುವರಿಯುತ್ತಾರಲ್ವೇ ಎಂದು ಸಮಾಧಾನ ಪಟ್ಟುಕೊಳ್ಳುತ್ತಿದ್ದರು. ಆದರೆ ಶುಭಮನ್ ಗಿಲ್ ಟೆಸ್ಟ್ ನಾಯಕನಾಗಿ ಯಶಸ್ವಿಯಾದ ಬೆನ್ನಲ್ಲೇ ಬಿಸಿಸಿಐ ಮನಸ್ಸು ತಿರುಗಿದೆ.

ರೋಹಿತ್, ಕೊಹ್ಲಿ ಇಲ್ಲದೆಯೂ ಟೀಂ ಇಂಡಿಯಾ ಯಶಸ್ಸು ಸಾಧಿಸಬಹುದು ಎಂಬ ವಿಶ್ವಾಸ ಮೂಡಿದೆ. ಹೀಗಾಗಿ ಈ ದಿಗ್ಗಜರನ್ನು ಏಕದಿನ ಮಾದರಿಯಿಂದಲೂ ಹೊರಗಟ್ಟಲು ಕಠಿಣ ಷರತ್ತೊಂದನ್ನು ಮುಂದಿಟ್ಟಿದೆ. ಕೊಹ್ಲಿ-ರೋಹಿತ್ ಗೆ ದೇಶೀಯ ಕ್ರಿಕೆಟ್ ಆಡಿದರೆ ಮಾತ್ರ ಟೀಂ ಇಂಡಿಯಾದಲ್ಲಿ ಸ್ಥಾನ ಎಂದು ಹೇಳಿರುವುದಾಗಿ ವರದಿಯಾಗುತ್ತಿದೆ.

ಅದೂ ಅಲ್ಲದೆ 2027 ರ ಏಕದಿನ ವಿಶ್ವಕಪ್ ನಲ್ಲಿ ಸ್ಥಾನ ಖಚಿತಪಡಿಸಲು ಬಿಸಿಸಿಐ ತಯಾರಿಲ್ಲ. ಹೀಗಿರುವಾಗ ಕನಿಷ್ಠ ಇಬ್ಬರಿಗೂ ಒಂದು ಗೌರವಯುತ ವಿದಾಯ ಪಂದ್ಯವನ್ನಾದರೂ ಆಯೋಜಿಸಿ ಎಂದು ಅಭಿಮಾನಿಗಳು ಆಗ್ರಹಿಸುತ್ತಿದ್ದಾರೆ. ಬಹುಶಃ ಸಚಿನ್ ಬಳಿಕ ಟೀಂ ಇಂಡಿಯಾದಲ್ಲಿ ಯಾರಿಗೂ ಗೌರವಯುತ ವಿದಾಯ ಪಂದ್ಯ ಸಿಕ್ಕಿಯೇ ಇಲ್ಲ. ಕನಿಷ್ಠ ಕೊಹ್ಲಿ, ರೋಹಿತ್ ಗಾದರೂ ಕೊಡಿ ಎನ್ನುತ್ತಿದ್ದಾರೆ ಫ್ಯಾನ್ಸ್.


Share this Story:

Follow Webdunia kannada

ಮುಂದಿನ ಸುದ್ದಿ

ವಿರಾಟ್ ಕೊಹ್ಲಿ, ರೋಹಿತ್ ಶರ್ಮಾಗೆ ಬಿಸಿಸಿಐ ಷರತ್ತೇನು