Select Your Language

Notifications

webdunia
webdunia
webdunia
webdunia

ಹೊಸ ಇತಿಹಾಸ ಬರೆಯುವ ಹೊಸ್ತಿಲಲ್ಲಿ ರೋಹಿತ್ ಶರ್ಮಾ-ವಿರಾಟ್ ಕೊಹ್ಲಿ

ಹೊಸ ಇತಿಹಾಸ ಬರೆಯುವ ಹೊಸ್ತಿಲಲ್ಲಿ ರೋಹಿತ್ ಶರ್ಮಾ-ವಿರಾಟ್ ಕೊಹ್ಲಿ
ಮೊಹಾಲಿ , ಬುಧವಾರ, 18 ಸೆಪ್ಟಂಬರ್ 2019 (10:45 IST)
ಮೊಹಾಲಿ: ದ.ಆಫ್ರಿಕಾ ವಿರುದ್ಧ ಇಂದು ನಡೆಯಲಿರುವ ದ್ವಿತೀಯ ಟಿ20 ಪಂದ್ಯದಿಂದ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮತ್ತು ಉಪನಾಯಕ ರೋಹಿತ್ ಶರ್ಮಾ ಹೊಸ  ದಾಖಲೆ ಬರೆಯುವ ನಿರೀಕ್ಷೆಯಲ್ಲಿದ್ದಾರೆ.

 

ಒಂದು ವೇಳೆ ಈ ಟಿ20 ಸರಣಿಯನ್ನು ಗೆದ್ದರೆ ಕೊಹ್ಲಿ ಭಾರತದ ನೆಲದಲ್ಲಿ ಆಫ್ರಿಕಾ ವಿರುದ್ಧ ಟಿ20 ಸರಣಿ ಗೆದ್ದ ಮೊದಲ ನಾಯಕನೆನಿಸಿಕೊಳ್ಳಲಿದ್ದಾರೆ. ಅಲ್ಲದೆ ಟಿ20 ಕ್ರಿಕೆಟ್ ನಲ್ಲಿ ಅತ್ಯಂತ ಹೆಚ್ಚು 50 ಪ್ಲಸ್ ರನ್ ಹೊಡೆದ ದಾಖಲೆಯನ್ನು ತಮ್ಮ ಹೆಸರಿಗೆ ಬರೆಸಿಕೊಳ್ಳಲು ರೋಹಿತ್ ಜತೆಗೆ ಪೈಪೋಟಿ ನಡೆಸಲಿದ್ದಾರೆ.

ಇನ್ನೊಂದೆಡೆ ರೋಹಿತ್ ಶರ್ಮಾ ಟಿ20 ಕ್ರಿಕೆಟ್ ನಲ್ಲಿ ವಿರಾಟ್ ಕೊಹ್ಲಿಯ ಗರಿಷ್ಠ  ಅರ್ಧಶತಕ ದಾಖಲೆ ಮುರಿಯುವ  ಅವಕಾಶ ಹೊಂದಿದ್ದಾರೆ. ಅಲ್ಲದೆ ದ.ಆಫ್ರಿಕಾ ವಿರುದ್ಧ ಟಿ20 ಪಂದ್ಯಗಳಲ್ಲಿ ಗರಿಷ್ಠ ರನ್ ಗಳಿಸಿದ ನ್ಯೂಜಿಲೆಂಡ್ ನ ಮಾರ್ಟಿನ್ ಗುಪ್ಟಿಲ್ (424 ರನ್) ದಾಖಲೆಯನ್ನು ಮುರಿಯಲಿದ್ದಾರೆ. ರೋಹಿತ್ ಸದ್ಯಕ್ಕೆ 341 ರನ್ ಗಳಿಸಿ ದ್ವಿತೀಯ ಸ್ಥಾನದಲ್ಲಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಚೀನಾ ಓಪನ್ ಬ್ಯಾಡ್ಮಿಂಟನ್: ಮೊದಲ ಸುತ್ತಿನಲ್ಲೇ ನಿರ್ಗಮಿಸಿದ ಸೈನಾ ನೆಹ್ವಾಲ್